ಬುಧವಾರ, ಸೆಪ್ಟೆಂಬರ್ 18, 2019
25 °C

‘ಚಂದ್ರಯಾನ–2’ ವೀಕ್ಷಣೆಗೆ ಸಿಂಧನೂರು ವಿದ್ಯಾರ್ಥಿನಿ ಆಯ್ಕೆ

Published:
Updated:
Prajavani

ರಾಯಚೂರು: ಚಂದ್ರಯಾನ–2 ನೌಕೆಯು ಚಂದ್ರನ ಅಂಗಳಕ್ಕೆ ಇಳಿಯುವುದನ್ನು ವೀಕ್ಷಿಸಲು ಸೆಪ್ಟೆಂಬರ್‌ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಬರುತ್ತಿದ್ದು, ಪ್ರಧಾನಿ ಜತೆಗೆ ಚಂದ್ರಯಾನ–2 ವೀಕ್ಷಿಸಲು ಜಿಲ್ಲೆಯ ಸಿಂಧನೂರಿನ ಡಾಫೋಡಿಲ್ಸ್‌ ಕಾನ್ಸೆಪ್ಟ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಕೂಡಾ ಆಯ್ಕೆಯಾಗಿದ್ದಾರೆ.

ರಾಜ್ಯದಿಂದ ಒಟ್ಟು ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಗೆ ದೇಶದಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 20 ನಿಮಿಷಗಳ 20 ಪ್ರಶ್ನೆಗಳ ಆನ್‌ಲೈನ್‌ ಪರೀಕ್ಷೆಯನ್ನು ನಡೆಸಲಾಗಿತ್ತು. ವೈಷ್ಣವಿ ಅವರು ಐದು ನಿಮಿಷದಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಿ ಆಯ್ಕೆಯಾಗಿದ್ದಾರೆ. ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿದ್ದರು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಇಸ್ರೋ ಕೇಂದ್ರಕ್ಕೆ ಆಹ್ವಾನಿಸಲಾಗಿದೆ.

 

Post Comments (+)