ಪ್ರೊ.ಸಿ.ನಾಗಣ್ಣಗೆ ವರ್ಧಮಾನ ಪ್ರಶಸ್ತಿ

7
ಪ್ರೊ.ಸಿ.ನಾಗಣ್ಣ ಮತ್ತು ಅಬ್ದುಲ್ ಹಮೀದ್ ಪಕ್ಕಲಡ್ಕ ಹಾಗೂ ಪ್ರೊ.ಟಿ.ಯಲ್ಲಪ್ಪ ಪುರಸ್ಕಾರ

ಪ್ರೊ.ಸಿ.ನಾಗಣ್ಣಗೆ ವರ್ಧಮಾನ ಪ್ರಶಸ್ತಿ

Published:
Updated:
Deccan Herald

ಮೂಡುಬಿದಿರೆ: 2017ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ನಿವೃತ್ತ ಪ್ರಾಧ್ಯಾಪಕ ಮೈಸೂರಿನ ಪ್ರೊ.ಸಿ.ನಾಗಣ್ಣ ಅವರ 'ಕಲ್ಲಲ್ಲ ಕಾಮನಬಿಲ್ಲು' ಲೇಖನ ಆಯ್ಕೆಯಾಗಿದೆ.

ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಪ್ರಶಸ್ತಿಗೆ ಬೆಂಗಳೂರಿನ ಪ್ರಾಧ್ಯಾಪಕ ಪ್ರೊ.ಟಿ.ಯಲ್ಲಪ್ಪ ಅವರ 'ಚಿಟ್ಟೆ ಮತ್ತು ಜೀವಯಾನ'  ಕವನಸಂಕಲನ ಹಾಗೂ ನಿವೃತ್ತ ಅರಣ್ಯ ಅಧೀಕ್ಷಕ ಮೂಡುಬಿದಿರೆಯ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ 'ಭ್ರಮೆ' ಕಥಾಸಂಕಲನ ಆಯ್ಕೆಯಾಗಿದೆ ಎಂದು ವರ್ಧಮಾನ ಪ್ರಶಸ್ತಿ ಪೀಠದ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ತಿಳಿಸಿದರು.

ವರ್ಧಮಾನ ಸಾಹಿತ್ಯ ಪ್ರಶಸ್ತಿ ₹25 ಸಾವಿರ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ₹15 ಸಾವಿರ ನಗದು (ಈ ಬಾರಿ ತಲಾ ₹ 7.50 ಸಾವಿರ) ಹೊಂದಿದೆ. ಮೂಡುಬಿದಿರೆಯಲ್ಲಿ ನಡೆಯುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !