ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಳ್ಳಾರಿಯಲ್ಲಿ ಗುರುಕುಲ ನಿರ್ಮಾಣ’

ವೀರ ಸೋಮೇಶ್ವರರಾಜ ದೇಶಿಕೇಂದ್ರ ಸ್ವಾಮೀಜಿ ಪ್ರತಿಪಾದನೆ
Last Updated 29 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬಳ್ಳಾರಿ: ‘ನಗರದಲ್ಲಿ ನಿವೇಶನ ಖರೀದಿಸಿ ಗುರುಕುಲ ನಿರ್ಮಿಸುವ ಮೂಲಕ ಮಕ್ಕಳಿಗೆ ಸಂಸ್ಕೃತಿ, ವೇದಗಳ ಅಧ್ಯಯನ, ಜ್ಯೋತಿಷ್ಯ ಕಲಿಸುವ ಉದ್ದೇಶವಿದೆ. ಮಠಗಳು ಜಾತಿ ಮತ ಪಂಥಗಳನ್ನು ಮೀರಿದ ಶ್ರೇಯಸ್ಸಿಗಾಗಿ ಕೆಲಸ ಮಾಡುತ್ತವೆ. ಜಿಲ್ಲೆಯ ಎಲ್ಲಾ ಮಠಗಳು ಒಗ್ಗಟ್ಟಾಗಿ ಶ್ರಮಿಸಬೇಕು’ ಎಂದು ರಂಭಾಪುರಿ ರೇಣುಕ ವೀರಸೋಮೇಶ್ವರರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಮರಿಸ್ವಾಮಿ ಮಠದಲ್ಲಿ ಸೋಮವಾರ ನಡೆದ ಧರ್ಮ ಸಭೆ ಹಾಗೂ ನೂತನ ಪಲ್ಲಕ್ಕಿ ಸೇವೆಯ ದಾನಿಗಳಿಗೆ ಗುರುರಕ್ಷೆ ಸಮಾರಂಭದಲ್ಲಿ ಮಾತನಾಡಿದರು.

‘ದುಷ್ಟರು ಪಂಚಪೀಠಗಳ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಭಕ್ತರು ತಡೆದು ಪಂಚಪೀಠಗಳ ಮಹತ್ವ ಹೆಚ್ಚಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಎಮ್ಮಿನಗನೂರಿನ ವಾಮದೇವ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ‘ಇಂದಿನ ಜಗತ್ತಿನಲ್ಲಿ ಮನುಷ್ಯ ದೇಹದ ಮೇಲೆ ಲಿಂಗವನ್ನು ಕಟ್ಟಿಕೊಂಡರೂ ಮನಸ್ಸಿನಲ್ಲಿ ದ್ವೇಷ –ಅಸೂಯೆ ನೆಲೆಗೊಂಡಿದೆ’ ಎಂದರು.

ಕುರುಗೋಡಿನ ರಾಘವಾಂಕ ಸ್ವಾಮೀಜಿ, ಕಲ್ಯಾಣ ಮಠದ ಕಲ್ಯಾಣ ಸ್ವಾಮಿ, ಉರಗೋಳು ಮಹಾಂತ ಸ್ವಾಮಿ, ಹರಗಿನಡೋೋಣಿಯ ಅಭಿನವ ಸಿದ್ಧಲಿಂಗ ಸ್ವಾಮಿ, ವರರುದ್ರ ಮುನಿಸ್ವಾಮಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಸ್ವಾಮಿ, ಸಿಂಧನೂರಿನ ಸೋಮನಾಥ ಶಿವಚಾರ್ಯ ಸ್ವಾಮಿ, ಶಾಸಕ ಜಿ.ಸೋಮಶೇಖರ ರೆಡ್ಡಿ, ಮುಖಂಡ ನಾ.ರಾ ಸೂರ್ಯನಾರಾಯಣ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT