ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕಕ್ಕೂ, ಬುದ್ಧಿವಂತಿಕೆಗೂ ನಂಟು

44,480 ಜನರ ವಂಶವಾಹಿಗಳ ವಿಶ್ಲೇಷಣೆ
Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಲಂಡನ್: ಓದಲು ಕನ್ನಡಕ ಧರಿಸುವ ವ್ಯಕ್ತಿಗಳು ಬುದ್ಧಿವಂತರಾಗಿರುತ್ತಾರೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 44,480 ಜನರ ವಂಶವಾಹಿಗಳನ್ನು ಅವರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

ಬುದ್ಧಿವಂತರ ಪೈಕಿ ಶೇ 30ರಷ್ಟು ಜನರು ಓದಲು ಕನ್ನಡಕಗಳನ್ನು ಅವಲಂಬಿಸಿರುತ್ತಾರೆ ಎಂಬುದನ್ನು ಅವರ ವಂಶವಾಹಿಗಳು ಸೂಚಿಸುತ್ತವೆ ಎಂದು ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.

ಹೆಚ್ಚು ಅರಿವಿನ ಸಾಮರ್ಥ್ಯವನ್ನೂ ಅಧ್ಯಯನದ ವೇಳೆ ಅಳೆಯಲಾಗಿದೆ. ಅರಿವಿಗೆ ಸಂಬಂಧಿಸಿದ 148 ವಂಶವಾಹಿ ಭಾಗಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ‘ನೇಚರ್ ಕಮ್ಯುನಿಕೇಷನ್ಸ್‘ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ.

ಅಧ್ಯಯನದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವೈವಿಧ್ಯಮಯ ಆಲೋಚನಾ ಪರೀಕ್ಷೆ ಹಾಗೂ ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT