ವೆಸ್ಲಿ, ಮುಳ್ಳೂರು ಸೇತುವೆ ಮುಳುಗಡೆ

7
ಚಿಕ್ಕೋಡಿ ತಾಲ್ಲೂಕು: ಮುಳುಗಿದ ಆರು ಸೇತುವೆಗಳು

ವೆಸ್ಲಿ, ಮುಳ್ಳೂರು ಸೇತುವೆ ಮುಳುಗಡೆ

Published:
Updated:

ಕೊಳ್ಳೇಗಾಲ: ತಾಲ್ಲೂಕಿನ ಶಿವನ ಸಮುದ್ರದ ಐತಿಹಾಸಿಕ ವೆಸ್ಲಿ ಸೇತುವೆಯು ಭಾನುವಾರ ಮುಳುಗಡೆಗೊಂಡಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ.

ಕಾವೇರಿ ನದಿಯಲ್ಲಿ ನಾಲ್ಕು ದಿನಗಳಿಂದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ತಾಲ್ಲೂಕಿನ ನದಿ ಪಾತ್ರದ 5 ಗ್ರಾಮಗಳು ಜಲಾವೃತಗೊಂಡಿವೆ.

ವೆಸ್ಲಿ ಸೇತುವೆ ಬಳಿ ಜನರು ಹೋಗದಂತೆ ಎರಡು ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಈ ಸೇತುವೆ ಪಕ್ಕದಲ್ಲಿರುವ ಹಳೆ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು ಅಪಾ
ಯದ ಮಟ್ಟ ತಲುಪಿದೆ. ಸತ್ತೇಗಾಲದಿಂದ ಬೆಂಗಳೂರಿಗೆ ಹೋಗುವ ಮಾರ್ಗ ರಾಷ್ಟ್ರೀಯ ಹೆದ್ದಾರಿ 209ರಲ್ಲಿರುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ.

ಮುಳ್ಳೂರು ಸೇತುವೆ ಮುಳುಗಡೆ: ಕೊಳ್ಳೇಗಾಲದಿಂದ ತಿ.ನರಸೀಪುರ ಸಂಪರ್ಕ ಕಲ್ಲಿಸುವ ರಸ್ತೆ ಮುಳುಗಡೆಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ತಾಲ್ಲೂಕಿನಿಂದ ಜನರು ಮುಳ್ಳೂರು ಗ್ರಾಮಕ್ಕೆ ಉತ್ತಂಬಳ್ಳಿ ಗ್ರಾಮದ ಮೂಲಕ ಸುತ್ತಿಕೊಂಡು ಹೋಗಬೇಕಾಗಿದೆ. ಹರಳೆ ಗ್ರಾಮದಿಂದ ನರೀಪುರಕ್ಕೆ ಹೋಗುವ ದಾರಿ ಮತ್ತು ಹರಳೆ ಗ್ರಾಮದಿಂದ ಕೊಳ್ಳೇಗಾಲಕ್ಕೆ ಹೋಗುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಇದರಿಂದ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣಾಗೆ ಹರಿದುಬರುತ್ತಿರುವ 1.13 ಲಕ್ಷ ಕ್ಯುಸೆಕ್‌ ನೀರು (ಹುಬ್ಬಳ್ಳಿ ವರದಿ): ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೂ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣವು 1.13 ಲಕ್ಷ ಕ್ಯುಸೆಕ್‌ ನೀರು ಇದ್ದು ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಹಿಪ್ಪರಗಿ ಜಲಾಶಯದಿಂದ 1.48 ಲಕ್ಷ ಕ್ಯುಸೆಕ್‌ ಹಾಗೂ ಆಲಮಟ್ಟಿ ಜಲಾಶಯದಿಂದ 1.23 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ಮುಳುಗಡೆಯಾಗಿರುವ ಚಿಕ್ಕೋಡಿ ತಾಲ್ಲೂಕಿನ ಆರು ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !