ಮಂಗಳವಾರ, ಜನವರಿ 21, 2020
28 °C
ಬಜತ್ತೂರು ಗ್ರಾಮ ಪಂಚಾಯಿತಿ ಗೋದಾಮಿನಲ್ಲಿ ಬಟ್ಟೆಗಳ ಬಂಡಲು ದಾಸ್ತಾನು

ಸಂತ್ರಸ್ತರಿಗೆ ಬಂದ ಬಟ್ಟೆ ಹೆಗ್ಗಣ ಪಾಲು!

ಸಿದ್ದಿಕ್ ನೀರಾಜೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ನೆರೆ ಸಂತ್ರಸ್ತರಿಗೆ ನೀಡಲು ದಾನಿಗಳು ನೀಡಿದ್ದ ಬಟ್ಟೆ ಬರೆಗಳು ಪುತ್ತೂರು ತಾಲ್ಲೂಕು ಬಜತ್ತೂರು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ದಾಸ್ತಾನಿದ್ದು, ಇಲಿ–ಹೆಗ್ಗಣಗಳ ಪಾಲಾಗುತ್ತಿವೆ.

ಮೂರು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಬಜತ್ತೂರು, ಉಪ್ಪಿನಂಗಡಿ, 34-ನೆಕ್ಕಿಲಾಡಿ ಗ್ರಾಮದಲ್ಲಿ ಹಲವರು ಮನೆ ಕಳೆದುಕೊಂಡಿದ್ದರು. ಅದೆಷ್ಟೋ ಜನರು ಉಟ್ಟ ಬಟ್ಟೆ ಹೊರತು ಪಡಿಸಿ, ಮಿಕ್ಕ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿ ನೆರವು ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಬೆಂಗಳೂರು ಮೂಲದ ಸಂಸ್ಥೆಯೊಂದು ದಾನಿಗಳಿಂದ ಸಂಗ್ರಹಿಸಿದ್ದ ಸುಮಾರು ₹10 ಲಕ್ಷ ಮೌಲ್ಯದ ಒಂದು ಲಾರಿ ಬಟ್ಟೆಗಳನ್ನು ಬಜತ್ತೂರು ಕಡೆಯ ಸಂತ್ರಸ್ತರಿಗಾಗಿ ಹಂಚಲು ಕಳುಹಿಸಿಕೊಟ್ಟಿತ್ತು. ಅದನ್ನು ಬಜತ್ತೂರು ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹೊಂದಿದ ಕಟ್ಟಡದಲ್ಲಿ ದಾಸ್ತಾನು ಇರಿಸಲಾಗಿತ್ತು. ಅಲ್ಲದೇ, ಸರಿಯಾಗಿ ಹಂಚಿಕೆ ಮಾಡದೇ, ಬಟ್ಟೆಗಳು ಉಳಿದುಕೊಂಡಿದ್ದವು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಬಟ್ಟೆಗಳನ್ನು ಆರಂಭದಲ್ಲಿ ಶಾಸಕರ ಮೂಲಕ ಸಾಂಕೇತಿಕವಾಗಿ ಕೆಲವರಿಗೆ ಹಂಚಿಕೆ ಮಾಡಲಾಗಿತ್ತು. ತದ ನಂತರ ವಿಲೇವಾರಿ ಸರಿಯಾಗಿ ನಡೆಯದೆ ಇದ್ದು, ಅರ್ಹ ಫಲಾನುಭವಿಗಳಿಗೆ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆಯೂ ಸಾಕಷ್ಟು  ದೂರುಗಳೂ ಕೇಳಿಬಂದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರಾದ ವಿಲ್ಫ್ರೆಡ್ ಡಿ'ಸೋಜ,  ‘ಬಜತ್ತೂರು ಗ್ರಾಮದಲ್ಲಿ 2 ಮನೆ ಮಾತ್ರ ಕುಸಿದು ಬಿದ್ದಿದ್ದು, ಉಳಿದಂತೆ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಪರಿಹಾರ ಧನ ನೀಡುವಾಗಲೂ ಅವ್ಯವಹಾರ ನಡೆದ ದೂರುಗಳಿತ್ತು. ಅಲ್ಲದೇ, ಸಂತ್ರಸ್ತರಿಗೆ ನೀಡಿದ ಬಳಿಕ ಉಳಿದ ಬಟ್ಟೆಗಳನ್ನು ಇಲ್ಲಿ ಇರಿಸಿಕೊಳ್ಳಬಾರದಾಗಿತ್ತು. ಬೇರೆ ಸಂತ್ರಸ್ತರಿಗೆ ಕಳುಹಿಸಿ ಕೊಡಬಹುದಿತ್ತು’ ಎಂದು ದೂರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು