ಗುರುವಾರ , ಅಕ್ಟೋಬರ್ 17, 2019
26 °C

ವಿಧಾನ ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ

Published:
Updated:

ಬೆಂಗಳೂರು: ವಿಧಾನ ಪರಿಷತ್ ಸಭಾನಾಯಕರಾಗಿ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೇಮಕಗೊಂಡಿದ್ದು, ಗುರುವಾರ ಪರಿಷತ್‌ನಲ್ಲಿ ಪ್ರಕಟಿಸಲಾಯಿತು.

ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‌ನ ಎಸ್.ಆರ್.ಪಾಟೀಲ, ಸರ್ಕಾರದ ಮುಖ್ಯ ಸಚೇತಕರಾಗಿ ಕವಟಗಿಮಠ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಬಸವರಾಜ ಹೊರಹಟ್ಟಿ, ಉಪನಾಯಕರಾಗಿ ಮರಿತಿಬ್ಬೇಗೌಡ, ಜೆಡಿಎಸ್ ಸಚೇತಕರಾಗಿ ಆರ್.ಚೌಡರೆಡ್ಡಿ ತೂಪಲ್ಲಿ ನೇಮಕಗೊಂಡಿದ್ದಾರೆ.

Post Comments (+)