ಶುಕ್ರವಾರ, ನವೆಂಬರ್ 15, 2019
23 °C

ವಿದ್ಯಾ ಬಾಲನ್ ಅಲ್ಲ ‘ಶಕುಂತಲಾ ದೇವಿ’!

Published:
Updated:
Prajavani

ನಟ ಅಕ್ಷಯ್ ಕುಮಾರ್ ಅವರೊಂದಿಗೆ ‘ಮಿಷನ್ ಮಂಗಲ್’ ಸಿನಿಮಾದಲ್ಲಿ ಮಿಂಚಿದ್ದ ನಟಿ ವಿದ್ಯಾ ಬಾಲನ್ ಈಗ ‘ಮಾನವ ಕಂಪ್ಯೂಟರ್’ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್, ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದೆ.

ಏನಿದು ಮಾನವ ಕಂಪ್ಯೂಟರ್ ಎಂದು ಅಚ್ಚರಿ ಪಡಬೇಡಿ. ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಶಕುಂತಲಾ ದೇವಿ ಅವರ ಜೀವನಾಧಾರಿತ ಸಿನಿಮಾದಲ್ಲಿ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ವಿದ್ಯಾ ಬಾಲನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಿನಿಮಾದ ಮೊದಲ ಟೀಸರ್ ಅಪ್‌ಲೋಡ್ ಮಾಡಿ ‘ಶಕುಂತಲಾ ದೇವಿ’ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ್ದಾರೆ.

ಗಣಿತ ಕ್ಷೇತ್ರದ ಮಹಾನ್ ಪ್ರತಿಭೆಯಾದ ‘ಶಕುಂತಲಾ ದೇವಿ’ ಅವರ ಕುರಿತು ಸಿನಿಮಾ ಮಾಡುತ್ತಿರುವ ಸುದ್ದಿ ಹೊರಬಿದ್ದ ಬಳಿಕ ಬಾಲಿವುಡ್ ಅಂಗಳದಲ್ಲಿ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು, ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಆ ಸಿನಿಮಾದಲ್ಲಿ ವಿದ್ಯಾ ನಟಿಸಲಿರುವುದು ಖಚಿತವಾದ ಬಳಿಕ ‘ಶಕುಂತಲಾ ದೇವಿ’ ಮೊದಲ ಲುಕ್‌ಗಾಗಿ ಬಾಲಿವುಡ್ ಎದುರು ನೋಡುತ್ತಿತ್ತು.

ನಿರೀಕ್ಷೆಯನ್ನು ಹುಸಿಗೊಳಿಸದ ವಿದ್ಯಾ ಸಾಮಾಜಿಕ ಜಾಲತಾಣಗಳನ್ನೇ ವೇದಿಕೆ ಮಾಡಿಕೊಂಡು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ಸಿನಿಮಾದ ನಿರ್ದೇಶಕಿ ಅನು ಮೆನನ್ ಜವಾಬ್ದಾರಿ ಹೆಚ್ಚಿದ್ದು, ಭಾರತದ ಅತ್ಯಂತ ಪ್ರತಿಭಾನ್ವಿತ ಗಣಿತಶಾಸ್ತ್ರಜ್ಞೆಯ ಜೀವನ ಕಥೆಯನ್ನು ಹೇಗೆ ದೃಶ್ಯ ರೂಪಕ್ಕೆ ಇಳಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ಕೆಲ ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾ ಬಾಲನ್ ಅವರ ಪಾತ್ರಕ್ಕೆ ಸಂಬಂಧಿಸಿದ ಚಿತ್ರವೊಂದು ವೈರಲ್ ಆಗಿತ್ತು. ಐದನೇ ವಯಸ್ಸಿನಲ್ಲೇ ಶಕುಂತಲಾ ದೇವಿ ಗಣಿತದ ಕ್ಷಿಷ್ಟಕರ ಸಮಸ್ಯೆಗಳನ್ನು ಕ್ಯಾಲುಕೇಟರ್ ಹಾಗೂ ಕಂಪ್ಯೂಟರ್ ಇಲ್ಲದೆಯೇ ಕ್ಷಣಾರ್ಧದಲ್ಲಿಯೇ ಪರಿಹರಿಸುತ್ತಿದ್ದರು

ಪ್ರತಿಕ್ರಿಯಿಸಿ (+)