ಮಲ್ಯ ಸೊತ್ತು ಜಪ್ತಿಗೆ ಆದೇಶ

7
ಮದ್ಯ‌ ಉದ್ಯಮಿಗೆ ಬೆಂಗಳೂರಿನಲ್ಲಿ 159ಕ್ಕೂ ಹೆಚ್ಚು ಆಸ್ತಿ

ಮಲ್ಯ ಸೊತ್ತು ಜಪ್ತಿಗೆ ಆದೇಶ

Published:
Updated:

ನವದೆಹಲಿ: ಬ್ಯಾಂಕುಗಳಿಗೆ ₹9 ಸಾವಿರ ಕೋಟಿ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪರಾರಿಯಾದ ಆರೋಪ ಹೊತ್ತಿರುವ ಉದ್ಯಮಿ ವಿಜಯ ಮಲ್ಯ ಅವರ ಬೆಂಗಳೂರಿನ 159 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದೆಹಲಿಯ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಧೀಶರು ಆದೇಶಿಸಿದ್ದಾರೆ. ವಿದೇಶಿ ವಿನಿಮಯ ನಿರ್ಬಂಧಗಳ ಉಲ್ಲಂಘನೆ (ಫೆರಾ) ಪ್ರಕರಣಕ್ಕೆ ಸಂಬಂಧಿಸಿ ಈ ಆದೇಶ ನೀಡಲಾಗಿದೆ. 

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹಿಂದೆ ನೀಡಿದ್ದ ಆದೇಶದ ಜಾರಿಗೆ ಹೆಚ್ಚು ಸಮಯ ಬೇಕು ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ಮೂಲಕ ಬೆಂಗಳೂರು ಪೊಲೀಸರು ಕೋರಿದ್ದರು. 

ಈ ಪ್ರಕರಣದಲ್ಲಿ ಮಲ್ಯ ವಿರುದ್ಧ ಹಲವು ಬಾರಿ ಸಮನ್ಸ್‌ ಹೊರಡಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲೇ ಇಲ್ಲ. ಹಾಗಾಗಿ ಅವರು ಅಪರಾಧಿ ಎಂದು ಜನವರಿ ನಾಲ್ಕರಂದು ನ್ಯಾಯಾಲಯ ಘೋಷಿಸಿತ್ತು. 

ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಮಗ ಕಾರ್ತಿಗೆ ಸೇರಿದ ₹54 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ. ಭಾರತ, ಸ್ಪೇನ್‌ ಮತ್ತು ಬ್ರಿಟನ್‌ನಲ್ಲಿ ಇರುವ ಆಸ್ತಿಗಳು ಇದರಲ್ಲಿ ಸೇರಿವೆ. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಈ ಮುಟ್ಟುಗೋಲು ನಡೆದಿದೆ.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !