ಶನಿವಾರ, ನವೆಂಬರ್ 23, 2019
18 °C

ಜಾರಕಿಹೊಳಿಗೇ ಟಿಕೆಟ್; ಜಿಗಜಿಣಗಿ

Published:
Updated:

ವಿಜಯಪುರ: ‘ಉಪ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರಿಗೇ ಟಿಕೆಟ್ ಕೊಡುತ್ತೇವೆ. ಅವರನ್ನು ಬಿಟ್ಟರೆ ಹೇಗೆ?, ಅವರೇ ಪಾತ್ರಧಾರಿ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಕ್ಷ ಬಿಟ್ಟು ಬಂದವರಿಗೆ ನಾವು ಅನ್ಯಾಯ ಮಾಡುವುದಿಲ್ಲ. 15 ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇವೆ, ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ’ ಎಂದರು.

‘ಅಥಣಿಯಲ್ಲೂ ನಂಬಿಕೊಂಡು ಬಂದವರಿಗೆ (ಮಹೇಶ ಕುಮಟಳ್ಳಿ) ಟಿಕೆಟ್ ಕೊಡಲಾಗುವುದು. ಲಕ್ಷ್ಮಣ ಸವದಿ ಅವರಿಗೆ ಪಕ್ಷದ ನಾಯಕರು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)