ಶುಕ್ರವಾರ, ನವೆಂಬರ್ 15, 2019
22 °C

ಗರ್ಭಿಣಿ ಸಿಬ್ಬಂದಿಗೆ ಠಾಣೆಯಲ್ಲೇ ಸೀಮಂತ : ಮಾನವೀಯತೆ ಮೆರೆದ ವಿಟ್ಲ ಪೊಲೀಸರು

Published:
Updated:
Prajavani

ವಿಟ್ಲ: ಪೋಲೀಸ್ ಇಲಾಖೆಯ ವತಿಯಿಂದ ಗರ್ಭಿಣಿಗೆ ಸೀಮಂತ ನಡೆಸುವ ಮೂಲಕ ವಿಟ್ಲ ಪೋಲೀಸರು ಮಾನವೀಯತೆ ಮೆರೆದಿದ್ದಾರೆ.

ವಿಟ್ಲ ಪೋಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೋಮ್ ಗಾರ್ಡ್‌ ಆಗಿ ಕೆಲಸ ಮಾಡುವ ಪುತ್ತೂರು ನಿವಾಸಿ ಮಲ್ಲಿಕಾ ಅವರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. 

ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವವಹಿಸುವುದು ಕಡಿಮೆ. ಆದರೆ ತಮ್ಮ ಠಾಣೆಯ ಮಹಿಳಾ ಸಿಬ್ಬಂದಿಗೆ ಸೀಮಂತ ಮಾಡಿದ್ದಾರೆ.

ತುಂಬು ಗರ್ಭಿಣಿ ಮಲ್ಲಿಕಾ ಅವರನ್ನು ವಿಟ್ಲ ಠಾಣಾ ಎಸ್‌ಐ ಯಲ್ಲಪ್ಪ ಮತ್ತು ಠಾಣಾ ಸಿಬ್ಬಂದಿ ಸೇರಿ ಠಾಣೆಯಲ್ಲೇ ಸೀಮಂತ ಮಾಡಿ ಬೀಳ್ಕೊಟ್ಟರು.

ಪ್ರತಿಕ್ರಿಯಿಸಿ (+)