ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಾಖಪಟ್ಟಣ ವಿಷಾನಿಲ ದುರಂತ | ಸಹಾಯವಾಣಿ ಪ್ರಾರಂಭಕ್ಕೆ ಡಿಸಿಎಂ ಸವದಿ ಕ್ರಮ

Last Updated 7 ಮೇ 2020, 11:35 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಸಮೀಪ ವಿಷಾನಿಲ ಸೋರಿಕೆ ಪ್ರಕರಣದಿಂದ ಅಪಾರ ಸಾವು- ನೋವು ಉಂಟಾಗಿರುವುದು ತೀರಾ ದುರ್ದೈವದ ಸಂಗತಿಯಾಗಿದೆ. ಈ ಘಟನೆಯಿಂದನೊಂದವರಿಗೆ ನನ್ನ ಸಾಂತ್ವನಗಳು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಘಟನೆ ಸಂಭವಿಸಿದ ಪ್ರದೇಶದಲ್ಲಿ ಕರ್ನಾಟಕದಿಂದ ತೆರಳಿದವರು ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪತ್ತೆ ಮಾಡಲು ಮತ್ತು ಅವರಿಗೆ ತಕ್ಷಣಕ್ಕೆ ಸೂಕ್ತ ಮಾಹಿತಿ - ಸಹಾಯ ಒದಗಿಸುವ ಉದ್ದೇಶದಿಂದ ನನ್ನ ಉಸ್ತುವಾರಿ ಜಿಲ್ಲೆಯಾದ ರಾಯಚೂರು ಜಿಲ್ಲಾಡಳಿತದ ಮೂಲಕ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಸಹಾಯವಾಣಿಯ ಸಂಖ್ಯೆ 08532-228559 ಮತ್ತು 8660761866 ಆಗಿರುತ್ತದೆ. ಸಂತ್ರಸ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT