ವೋಟ್‌ ಮಾಡೋಣ ಬನ್ನಿ: ಯೋಚಿಸದೇ ವೋಟ್‌ ಹಾಕಬೇಡಿ - ಐಂದ್ರಿತಾ ರೈ

ಬುಧವಾರ, ಏಪ್ರಿಲ್ 24, 2019
33 °C

ವೋಟ್‌ ಮಾಡೋಣ ಬನ್ನಿ: ಯೋಚಿಸದೇ ವೋಟ್‌ ಹಾಕಬೇಡಿ - ಐಂದ್ರಿತಾ ರೈ

Published:
Updated:
Prajavani

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮತದಾನದ ಪರಿಕಲ್ಪನೆಯೇ ಇರಲಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರ ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕನ್ನು ಸಂವಿಧಾನ ಒದಗಿಸಿದೆ. ಸದ್ಯ, ನಾವೀಗ ಮಾಹಿತಿ ಯುಗದಲ್ಲಿದ್ದೇವೆ. ಬೆರಳಿನ ತುದಿಯಲ್ಲಿ ಎಲ್ಲ ಮಾಹಿತಿ ಲಭ್ಯವಿದ್ದರೂ ಚುನಾವಣೆಯಲ್ಲಿ ಯಾರು, ಎಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿ, ಅರಿವು ಬಹುತೇಕರಿಗೆ ಇಲ್ಲ. 

ಮತದಾನ ಪ್ರಕ್ರಿಯೆಯಲ್ಲಿ ಎಚ್ಚೆತ್ತುಕೊಳ್ಳದೇ, ಜಾಗೃತಿವಹಿಸದೇ, ರಾಜಕಾರಣಿಗಳ ಬಗ್ಗೆ ಪೂರ್ವಾಪರ ಯೋಚನೆ ಮಾಡದೇ ವೋಟ್‌ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಲು ನಿಂತ ವ್ಯಕ್ತಿಯ ಸಾಧನೆಗಳೇನು, ವೈಫಲ್ಯಗಳೇನು ಎಂಬುದರ ಬಗ್ಗೆ ಯೋಚಿಸಲೇಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವ, ದೇಶ ಮುನ್ನಡೆಸಿಕೊಂಡು ಹೋಗುವ ನಾಯಕನಿಗೆ ನಿಮ್ಮ ಮತ ಹಾಕಿ. ಭವಿಷ್ಯದ ಭಾರತ ನಿಮ್ಮ ಕೈಯಲ್ಲಿದೆ.

–ಐಂದ್ರಿತಾ ರೈ, ನಟಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !