ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಮಾಡಿದವರಿಗೆ ಉಚಿತ ಫೋಟೊ!

Last Updated 21 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿ ಏ. 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಬಂದವರಿಗೆ 4x6 ಅಳತೆಯ ಒಂದು ಅಥವಾ ಪಾಸ್‌ಪೋರ್ಟ್‌ ಅಳತೆಯ 8 ಫೋಟೊಗಳನ್ನು ಉಚಿತವಾಗಿ ತೆಗೆದುಕೊಡುವುದಲ್ಲದೇ, ಸಿಹಿ ನೀಡುವುದಾಗಿ ಕಪಿಲೇಶ್ವರ ಮಂದಿರ ಬಳಿಯ ರಾಣಿ ಡಿಜಿಟಲ್ ಸ್ಟುಡಿಯೊ ಮಾಲೀಕ ರವಿ ಹೊಂಗಲ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ವಿಶ್ವ ಛಾಯಾಗ್ರಹಣ ದಿನ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಉಚಿತವಾಗಿ ಫೋಟೋಗಳನ್ನು ತೆಗೆದುಕೊಟ್ಟು ಅವರು ಗಮನಸೆಳೆದಿದ್ದರು.

‘ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕು. ಇದಕ್ಕಾಗಿ ನಾನು ಈ ರೀತಿ ಸಹಕರಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT