ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮತದಾನ ಆರಂಭ

Last Updated 23 ಏಪ್ರಿಲ್ 2019, 4:07 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದ ಒಟ್ಟು 14ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಕಲಬುರ್ಗಿ
ಗುಲಬರ್ಗಾದಲ್ಲಿಒಟ್ಟು2,368 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇವುಗಳಲ್ಲಿ 516 ಸೂಕ್ಷ್ಮ ಮತ್ತು 61 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ 11,162 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

10,78,077 ಪುರುಷ ಹಾಗೂ 10,47,835 ಮಹಿಳೆಯರು ಸೇರಿ ಒಟ್ಟು 21,25,912 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಒಬ್ಬರು ಎಸ್‌ಪಿ, ಎಎಸ್‌ಪಿ,12 ಡಿವೈ‌ಎಸ್‌ಪಿ, 37 ಸಿಪಿಐ, 60 ಪಿಎಸ್ಐ,146 ಎಎಸ್ಐ, 1,732 ಹೆಡ್ ಕಾನ್ ಸ್ಟೆಬಲ್ ಗಳು ಹಾಗೂ ಕಾನ್ಸ್ಟೆಬಲ್ಗಳು, 1,544 ಹೋಮ್‌ಗಾರ್ಡ್ಸ್, 80 ಜೈಲ್ ವಾರ್ಡರ್ಸ್, 14 ಅರಣ್ಯ ರಕ್ಷಕರು,9 ಕೆ ಎಸ್‌ ಆರ್‌ಪಿ, 5 ಅರೆಸೇನಾ ತುಕಡಿ, 120 ಸ್ಪೆಕ್ಟರ್ ಮೊಬೈಲ್, 42 ಸೂಪರ್‌ವೈಜಿಂಗ್ ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ.

ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ ಸೇರಿ 12 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಇವಿಎಂ ಪರಿಶೀಲನೆ
ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಅಂಗವಿಕಲರಿಗಾಗಿಸ್ಥಾಪಿಸಲಾಗಿರುವ ಮತಗಟ್ಟೆ ಸಂಖ್ಯೆ 175ರಲ್ಲಿ ಅಲ್ಲಿನ ಸಿಬ್ಬಂದಿ ಇವಿಎಂ, ವಿವಿ ಪ್ಯಾಟ್‌ಗಳನ್ನು ಜೋಡಿಸಿ, ಪರಿಶೀಲಿಸಿದರು.

ಬಾಗಲಕೋಟೆ
ಬಾಗಲಕೋಟೆ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 1938 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 17,00,547 ಜನರು ಈ ಬಾರಿ ಮತ ಚಲಾಯಿಸಲಿದ್ದಾರೆ.

17 ಕಡೆಗಳಲ್ಲಿ ಮಹಿಳೆಯರಿಗಾಗಿ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸುವ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.

ಬೀಳಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆರಕಲ್ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಮತಗಿಯಲ್ಲಿ ಅಂಗವಿಕಲರಿಗಾಗಿಯೇ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಬಾರಿ 39,148 ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ಇದೇ ಮೊದಲ ಬಾರಿಗೆ ಹಕ್ಕು ಚಲಾಯಿಸುವ ಉಮೇದಿಯಲ್ಲಿದ್ದಾರೆ.

ರಬಕವಿಯ ಮತಗಟ್ಟೆ ಸಂಖ್ಯೆ 94ರ ಸಖಿ ಕೇಂದ್ರದ ಸಿಬ್ಬಂದಿ ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದ ಕ್ಷಣ.
ರಬಕವಿಯ ಮತಗಟ್ಟೆ ಸಂಖ್ಯೆ 94ರ ಸಖಿ ಕೇಂದ್ರದ ಸಿಬ್ಬಂದಿ ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದ ಕ್ಷಣ.

ಅರ್ಧ ತಾಸು ಕಳೆದರೂ ಆರಂಭವಾಗದ ಮತದಾನ ಪ್ರಕ್ರಿಯೆ
ಬೆಳಗಾವಿ:
ಇಲ್ಲಿನಸರಸ್ವತಿ ಶಾಲೆಯ ಮತಗಟ್ಟೆಯಲ್ಲಿ ಇನ್ನೂ ಮತದಾನ ಪ್ರಕ್ರಿಯೆ ಆರಂಭವಾಗಿಲ್ಲ. ಮತದಾನ ಪ್ರಕ್ರಿಯೆಗೆ ನಿಗದಿಯಾಗಿರುವ ಸಮಯ ಕಳೆದು ಅರ್ಧ ಗಂಟೆ ಸಮಯ ಕಳೆದಿದ್ದರೂ,ಇನ್ನೂ ಇವಿಎಂ ಜೋಡಿಸುವ ಕಾರ್ಯವೇ ಪೂರ್ಣಗೊಂಡಿಲ್ಲ. ಹೀಗಾಗಿ ಮತದಾರರು ಕಾಯುವಂತಾಗಿದೆ.

ಬೆಳಗಾವಿ‌ ಜಿಲ್ಲೆ ಬೈಲಹೊಂಗಲ ಪುರಸಭೆ ಆವರಣದ ಮತಗಟ್ಟೆಯಲ್ಲಿ ಇವಿಎಂನಲ್ಲಿ ದೋಷ. ತಡವಾಗಿ ಆರಂಭವಾದ ಮತದಾನ.

ಚಿತ್ರ 01. ಮತದಾರರು ಕಾಯುತ್ತಿರುವುದು ಚಿತ್ರ 02.ಇವಿಎಂ ಜೋಡಿಸುತ್ತಿರುವ ಸಿಬ್ಬಂದಿ
ಚಿತ್ರ 01. ಮತದಾರರು ಕಾಯುತ್ತಿರುವುದು ಚಿತ್ರ 02.ಇವಿಎಂ ಜೋಡಿಸುತ್ತಿರುವ ಸಿಬ್ಬಂದಿ

ಉತ್ತರ ಕನ್ನಡ
ಕಾರವಾರ: ಕಾರವಾರ ಸೇರಿದಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ.

ಕ್ಷೇತ್ರದ ಒಟ್ಟು 1,922 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾಯಿಸುತ್ತಿದ್ದಾರೆ. ಮುಂಜಾನೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಲು ಮತಗಟ್ಟೆಗೆ ಮತದಾರರು ಬಂದಿದ್ದಾರೆ.

ಮತಗಟ್ಟೆಗಳಲ್ಲಿ ನಸುಕಿನಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಗಿತ್ತು. ಬೆಳಿಗ್ಗೆ 6ರಿಂದ ಅಣಕು ಮತದಾನ ನಡೆಯಿತು. ಎಲ್ಲ ಅಭ್ಯರ್ಥಿಗಳ ಏಜಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಿತು. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಕನಿಷ್ಠ ಒಂದೊಂದು ಮತಹಾಕಿ ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಣಕು ಮತದಾನಕ್ಕೆ ಗರಿಷ್ಠ 50 ಮತಗಳನ್ನು ಹಾಕಲು ಅವಕಾಶವಿತ್ತು.

ಜಿಲ್ಲೆಯ 1,922 ಮತಗಟ್ಟೆಗಳ ಪೈಕಿ 286 ಸೂಕ್ಷ್ಮ ಮತ್ತು 78 ಅತಿಸೂಕ್ಷ್ಮ ಮತಗಟ್ಟೆಗಳು ಇವೆ. ಈ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ. 96 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಮತಗಟ್ಟೆ ಸಂಖ್ಯೆ 99ರ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಕಾರಣ ಮತದಾನ ಪ್ರಕ್ರಿಯೆ ಅರ್ಧ ಗಂಟೆ ತಡವಾಗಿ ಮತದಾನ ಆರಂಭವಾಯಿತು.

ಕಾರವಾರದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಕನ್ನಡ ಶಾಲೆಯಲ್ಲಿರುವ (ಬಾಯಿ ಕುವರಾಬಾಯಿ) ಮತಗಟ್ಟೆಯ ಮತಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಅಧಿಕಾರಿಗಳು ಸಮಸ್ಯೆ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಶಿರಸಿ: ನಗರದಲ್ಲಿ ಜನರು ಮತದಾನ‌ ಮಾಡಲು ಉತ್ಸಾಹದಿಂದ ತೆರಳುತ್ತಿದ್ದಾರೆ. ಬೆಳಗಿನಿಂದಲೇ ಜನರು‌ ಮತಗಟ್ಟೆಗಳಲ್ಲಿ ಸರಣಿಯಲ್ಲಿ ನಿಂತಿರುವುದು ಕಂಡುಬಂತು.

2ನೇ‌ ನಂಬರ್ ಶಾಲೆಯ ಮತಗಟ್ಟೆಯಲ್ಲಿ 7 ಗಂಟೆಯಿಂದಲೇ ಜನರು ಸರದಿಯಲ್ಲಿ ನಿಂತಿದ್ದರು.

ಮತದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಜಾಗೃತಿ ಮೂಡಿಸುತ್ತಿದ್ದ ಡಾ. ರವಿಕಿರಣ ಪಟವರ್ಧನ ಅವರು ಎಂದಿನಂತೆ ಈ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT