ಭಾನುವಾರ, ಆಗಸ್ಟ್ 18, 2019
25 °C

ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣ: ಐವರು ನಿಧಿಗಳ್ಳರ ಬಂಧನ

Published:
Updated:

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗುಂದಿಯಲ್ಲಿ ವ್ಯಾಸರಾಯರ ವೃಂದಾವನವನ್ನು ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ವೃಂದಾವನವನ್ನು ನಾಶ ಪಡಿಸಲು ಬಳಸಲಾದ ಹಾರೆಗಳು,ಸುತ್ತಿಗೆ, ಬುಟ್ಟಿ ಹಾಗೂ ಪಿಕಾಸಿ, ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಇರುವ ಇನೋವ ಕಾರನ್ನು ಜಪ್ತಿ ಮಾಡಲಾಗಿದೆ. ನಿಧಿಗಾಗಿ ವ್ಯಾಸರಾಜರ ವೃಂದಾವನವನ್ನು ಧ್ವಂಸ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಪೊಲೀಸರು.

ಇದನ್ನೂ ಓದಿ... ಆನೆಗೊಂದಿ: ವ್ಯಾಸರಾಜರ ವೃಂದಾವನ ಮರುಪ್ರತಿಷ್ಠಾಪನೆ


ಬಂಧಿತರಾಗಿರುವ ಆರೋಪಿಗಳು ಅಂತರ ರಾಜ್ಯ ನಿಧಿಗಳ್ಳರು ಎನ್ನಲಾಗಿದೆ. ಈ ಪ್ರಕರಣದ ತನಿಖೆ ನಡೆಸಲು 5 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಇವನ್ನೂ ಓದಿ... 

ವ್ಯಾಸರಾಜತೀರ್ಥರ ವೃಂದಾವನ ಧ್ವಂಸ: ಪುನರ್‌ ನಿರ್ಮಾಣ ಆರಂಭ

ಇದು ಹಿಂದೂ ಸಮಾಜಕ್ಕೆ ಅವಮಾನದ ಸಂಗತಿ: ಸತ್ಯಾತ್ಮ ತೀರ್ಥರ ಪ್ರತಿಕ್ರಿಯೆ

ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ

ಬೃಂದಾವನ ಧ್ವಂಸ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಮಂತ್ರಾಲಯ ಸ್ವಾಮೀಜಿ ಒತ್ತಾಯ

ತನಿಖೆಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರ ಆಗ್ರಹ

Post Comments (+)