ಶುಕ್ರವಾರ, ಡಿಸೆಂಬರ್ 6, 2019
21 °C

ಕನಸಿನ ಉದ್ಯೋಗ: 9 ತಾಸು ನಿದ್ರೆ ಮಾಡಿದ್ರೆ ಸಿಗತ್ತೆ ₹1 ಲಕ್ಷ ಸಂಬಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ನಿಮಗೆ ನಿದ್ದೆ ಮಾಡುವುದೆಂದರೆ ಇಷ್ಟವೇ? ಹಾಗಾದರೆ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಕಂಪನಿಯೊಂದು ನೀಡುತ್ತಿರುವ ಸುವರ್ಣಾವಕಾಶ ಬಳಸಿಕೊಂಡು, ₹1 ಲಕ್ಷ ಸಂಭಾವನೆ ಪಡೆಯಿರಿ.

ಇದೇನಪ್ಪ ಮಲಗುವುದಕ್ಕೆ ಸಂಬಳ ಕೊಡುತ್ತಾರೆ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದೀರಾ? ಯಾರಿಗುಂಟು ಯಾರಿಗಿಲ್ಲ ಎನ್ನುವ ಅವಕಾಶವನ್ನು ವೇಕ್‌ಫಿಟ್‌ ಸ್ಲೀಪ್‌ ಸಲ್ಯೂಷನ್‌ ಕಂಪನಿ ಒದಗಿಸುತ್ತಿದೆ.

ಕಂಪನಿಯ ಹೊಸ ಪ್ರಾಜೆಕ್ಟ್‌ಗಾಗಿ ‘ಸ್ಲೀಪ್‌ ಇಂಟರ್ನ್‌ಷಿಪ್‌’ಗೆ ಆಹ್ವಾನಿಸಲಾಗಿದೆ. 100 ದಿನಗಳ ಕಾಲ 9 ತಾಸು ನಿದ್ದೆ ಮಾಡುವುದೇ ನಿಮ್ಮ ಕೆಲಸ. ಇದಕ್ಕಾಗಿ ಕಂಪನಿಯೂ ಡ್ರೆಸ್‌ಕೋಡ್‌ ಸಹ ಮಾಡಿದೆ. ಇಂಟರ್ನಿ ಪೈಜಾಮಾ ಹಾಕಿಕೊಂಡೆ ಮಲಗಬೇಕು.

‘ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ,’ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಹೇಳಿದ್ದಾರೆ.

‘ಇಂಟರ್ನಿಗಳು ಮಲಗುವ ರೀತಿಯನ್ನು ಕಂಪನಿ ಗಮನಿಸುತ್ತದೆ. ಅಲ್ಲದೆ ಸಮಾಲೋಚನಾ ಸೆಷನ್ಸ್ ಹಾಗೂ ನಿದ್ರೆಯ ಜಾಡನ್ನು ವೀಕ್ಷಿಸಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ,’ ಎಂದು ಚೈತನ್ಯ ರಾಮಲಿಂಗೇಗೌಡ ಹೇಳಿದ್ದಾರೆ.

ನಿದ್ರೆ ಮಾಡುವುದಕ್ಕಾಗಿ ಏನು ಬೇಕಾದರು ಮಾಡುವಂತಹ ಇಂಟರ್ನಿಗಾಗಿ ಹುಡುಕಾಟ ನಡೆಯುತ್ತಿರುವ ವೇಕ್‌ಫಿಟ್‌, ಹಾಸಿಗೆ ಮತ್ತು ಮಂಚವನ್ನು ತಯಾರಿಸುವ ಕಂಪನಿಯಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು