ವಕ್ಫ್‌ ಹಗರಣ: ಸೆ.6ಕ್ಕೆ ಬಿಜೆಪಿ ಧರಣಿ

7

ವಕ್ಫ್‌ ಹಗರಣ: ಸೆ.6ಕ್ಕೆ ಬಿಜೆಪಿ ಧರಣಿ

Published:
Updated:

ಬೆಂಗಳೂರು: ವಕ್ಫ್‌ ಆಸ್ತಿಯ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ವಿಧಾನಮಂಡಲದಲ್ಲಿ ವರದಿ ಮಂಡನೆ ಮಾಡಬೇಕು ಎಂದು ಆಗ್ರಹಿಸಿ ವಿಧಾನಪರಿಷತ್‌ನ ಬಿಜೆಪಿ ಸದಸ್ಯರು ಸೆಪ್ಟೆಂಬರ್‌ 6ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ ಎಂದು ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ವಕ್ಫ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ಸದನದಲ್ಲೇ ಜುಲೈ 12ರಂದು ಭರವಸೆ ನೀಡಿದ್ದರು. ಸಿಬಿಐಗೆ ಒಪ್ಪಿಸಲು 15 ದಿನಗಳ ಗಡುವು ವಿಧಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅನ್ವರ್‌ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒತ್ತಾಯಿಸಲಾಗಿತ್ತು. ವಿಧಾನಪರಿಷತ್‌ನಲ್ಲಿ ವರದಿ ಮಂಡಿಸುವುದಾಗಿ ಜಿ.ಪರಮೇಶ್ವರ ಭರವಸೆ ನೀಡಿದ್ದರು. ವರದಿ ಮಂಡಿಸಿದರೆ ಕಾಂಗ್ರೆಸ್‌ನ ಘಟಾನುಘಟಿಗಳ ರಾಜಕೀಯ ಜೀವನಕ್ಕೆ ಸಂಚಕಾರ ಬರಲಿದೆ ಎಂದು ಅರಿತು ವರದಿ ಮಂಡನೆಗೆ ಸರ್ಕಾರ ಹಿಂದೇಟು ಹಾಕಿತ್ತು’ ಎಂದರು.

ಮರುಪರಿಶೀಲನೆಗೆ ಆಗ್ರಹ: ‘94 ಸಿ ಹಾಗೂ 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಾಗದಿದ್ದರೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಕಡು ಬಡವರು ವಾಸ್ತವ್ಯ ಹೂಡಿದ್ದ ಜಾಗದ ಹಕ್ಕುಪತ್ರ ಪಡೆಯುವ ಕಟ್ಟಕಡೆಯ ಆಸೆಯೂ ಕಮರಿ ಹೋಗಲಿದೆ. ಹೀಗಾಗಿ, ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !