ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಯಲ್ಲಿ ಉಕ್ಕಿದ ನೀರಿನ ಸೆಲೆ!

Last Updated 20 ಮೇ 2019, 4:41 IST
ಅಕ್ಷರ ಗಾತ್ರ

ಹಿರಿಯೂರು: 700–800 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ. ಹೀಗಾಗಿ ಐದಾರು ವರ್ಷಗಳಿಂದ ಬತ್ತಿಹೋಗಿದ್ದ 25 ಅಡಿ ಆಳದತಾಲ್ಲೂಕಿನ ಮ್ಯಾದನಹೊಳೆ ಮಜ್ಜನ ಬಾವಿಯೊಂದರಲ್ಲಿ ನಾಲ್ಕು ದಿನಗಳಿಂದ ಒಮ್ಮೆಲೆ ನೀರಿನ ಸೆಲೆ ಉಕ್ಕುವ ಮೂಲಕ ಅಚ್ಚರಿ ಮೂಡಿಸಿದೆ.

ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ವೀರಭದ್ರೇಶ್ವರ ದೇವಸ್ಥಾನವಿದ್ದು, ದೇವರ ಮಜ್ಜನಕ್ಕೆಂದು ನಿರ್ಮಿಸಿದ್ದ ಈ ತೆರೆದ ಬಾವಿಯಲ್ಲಿ ನೀರು ಕಂಡುಬಂದಿದೆ.

‘ಗ್ರಾಮದ ಮುಖಂಡರಾದ ಎಂ.ಆರ್. ಪಾಂಡುರಂಗಪ್ಪ, ಎಂ.ಆರ್.ಪುಟ್ಟಸ್ವಾಮಿ, ಮಡಿವಾಳ ರಂಗನಾಥಪ್ಪ, ಪೂಜಾರ್ ಬಸಣ್ಣ ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಯನ್ನು ಶುಚಿಗೊಳಿಸಿದ ಮೇಲೆ ಮೂರು ದಿನಗಳಲ್ಲಿ ಕನಿಷ್ಠ 4 ಅಡಿ ನೀರು ಬಂದಿದೆ’ ಎಂದು ಗ್ರಾಮದ ರೈತ ಎಂ.ಎಚ್.ಷಣ್ಮುಖ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರು ಬಂದಿರುವುದು ಪವಾಡ ಎನಿಸಿದೆ. ಗಂಗಾ ಪೂಜೆ ಮಾಡಿದ್ದು, ದೇವರ ಮಜ್ಜನಕ್ಕೆ ಈಗ ಇದೇ ನೀರನ್ನು ಬಳಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT