ಭಾನುವಾರ, ಆಗಸ್ಟ್ 25, 2019
20 °C

ಹಲವೆಡೆ ರಸ್ತೆಗೆ ನುಗ್ಗಿದ ನೀರು: ಬಸ್‌ ಸಂಚಾರ ಸ್ಥಗಿತ

Published:
Updated:

ಹುಬ್ಬಳ್ಳಿ: ಮಳೆ ಹಾಗೂ ಮಹಾರಾಷ್ಟ್ರ ದಿಂದ ಹರಿದು ಬರುತ್ತಿರುವ ನೀರು ರಸ್ತೆಗಳ ಮೇಲೆ ಹರಿಯುತ್ತಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ‌ ವ್ಯಾಪ್ತಿಯ ಹಲವು ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.

ಹುಬ್ಬಳ್ಳಿ- ಕಾರವಾರ, ಶಿರಸಿ- ಸಿದ್ದಾಪುರ, ಶಿರಸಿ- ಅಂಕೋಲಾ, ಬೆಳಗಾವಿ- ಗೋವಾ, ಬೆಳಗಾವಿ- ಕೊಲ್ಹಾಪುರ, ಬೆಳಗಾವಿ- ವಿಜಯಪುರ, ಜಮಖಂಡಿ- ವಿಜಯಪುರ ಹಾಗೂ ಜಮಖಂಡಿ- ಮೀರಜ್ ಮಾರ್ಗಗಳಲ್ಲಿ ವಾಹನಗಳು ಸಂಚರಿಸಿತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂದ್‌ಗಂಗಾ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಸೇರಿದಂತೆ ಹಲವು ಮಾರ್ಗಗಳ ಮೇಲೆ ನೀರು ಹರಿಯುತ್ತಿರುವುದರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ.

Post Comments (+)