22 ಜಿಲ್ಲೆಗಳಲ್ಲಿ ಮಳೆ ಕೊರತೆ

7

22 ಜಿಲ್ಲೆಗಳಲ್ಲಿ ಮಳೆ ಕೊರತೆ

Published:
Updated:
Deccan Herald

ಬೆಂಗಳೂರು: ಮುಂಗಾರಿನ ಆರಂಭದಲ್ಲಿ ಆರ್ಭಟಿಸಿದ್ದ ಮಳೆ ರಾಯ ಬಳಿಕ ಮರೆಯಾಗಿದ್ದು, 22 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ.

ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಇದೇ ಜೂನ್‌ 1ರಿಂದ ಜುಲೈ 30ರ ಅಂತ್ಯವರೆಗಿನ ಅಂಕಿಅಂಶದ ಪ್ರಕಾರ, ಒಟ್ಟಾರೆ ರಾಜ್ಯದ ಸರಾಸರಿ ಮಳೆ ಪ್ರಮಾಣ ಶೇ 3ರಷ್ಟು ಹೆಚ್ಚಿದೆ.

ದಕ್ಷಿಣ ಒಳನಾಡಿನ 11 ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿಲ್ಲ. ಆದರೆ, ಒಟ್ಟಾರೆ ಈ ಭಾಗದಲ್ಲಿ  ಶೇ 2ರಷ್ಟು ಮಳೆ ಕೊರತೆಯಾಗಿದೆ.

ಆದರೆ, ಉತ್ತರ ಒಳನಾಡು ಭಾಗದ ಎಲ್ಲಾ 12 ಜಿಲ್ಲೆಗಳಲ್ಲಿ ಮಳೆಯ ಅಭಾವ ಉಂಟಾಗಿದೆ. ಈ ಭಾಗದಲ್ಲಿ ಶೇ 26ರಷ್ಟು ಕೊರತೆಯಾಗಿದೆ. ಅದರಲ್ಲೂ ರಾಯಚೂರು, ವಿಜಯಪುರ, ಯಾದಗಿರಿ, ಗದಗ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೈ ಕೊಟ್ಟಿದೆ. ಮಲೆನಾಡು ಮತ್ತು ಕರಾವಳಿಯ ಒಟ್ಟು ಏಳು ಜಿಲ್ಲೆಗಳ ಪೈಕಿ ಉಡುಪಿಯಲ್ಲಿ ಮಳೆಯ ಕೊರತೆ ಎದುರಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದ ಮಳೆ ಈ ಭಾಗದಲ್ಲಿರುವ ಹಾಸನ ಜಿಲ್ಲೆಯಲ್ಲಿ (ಶೇ 57 ರಷ್ಟು) ದಾಖಲಾಗಿದೆ.

ಮೇ ಮತ್ತು ಜೂನ್‌ ಮೊದಲ ವಾರದವರೆಗೆ ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಆದರೆ, ನಂತರ ದಿನಗಳಲ್ಲಿ ನಿರೀಕ್ಷೆಯಂತೆ ಮಳೆ ಬಂದಿಲ್ಲ. ಮುಂದಿನ 15 ದಿನಗಳ ಅವಧಿಯಲ್ಲಿ ಮಳೆ ಸುರಿಯದಿದ್ದರೆ ಬಿತ್ತನೆ ಕಾರ್ಯಗಳು ಕುಂಠಿತಗೊಳ್ಳುವ ಸಾಧ್ಯತೆ ಇದೆ. ಮೇವು, ಆಹಾರ ಕೊರತೆ ಹೆಚ್ಚುವ ಸಾಧ್ಯತೆಯೂ ಇದೆ.

ಮುಂಗಾರು ಆರಂಭದಲ್ಲಿ ಮಳೆಯ ತೀವ್ರತೆಯನ್ನು ಕಂಡಿದ್ದ ರೈತ ಸಮುದಾಯ, ಈ ಬಾರಿಯಾದರೂ ಉತ್ತಮ ಮಳೆಯಿಂದ ಇಳುವರಿ ಹೆಚ್ಚು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ರಸಗೊಬ್ಬರ ಕೊರತೆಯೂ ಇಲ್ಲ. ಆದರೆ, ಸಾಕಷ್ಟು ‍ಪ್ರಮಾಣದಲ್ಲಿ ಮಳೆ ಬೀಳದೇ ಇರುವುದರಿಂದ ಸಮಸ್ಯೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಮಳೆ ಕೊರತೆಯಾದ ಜಿಲ್ಲೆಗಳು (ಜೂನ್ 1ರಿಂದ ಜುಲೈ 30ರವರೆಗೆ)

ಜಿಲ್ಲೆ; ಕೊರತೆ ಪ್ರಮಾಣ (ಶೇ)

ರಾಯಚೂರು; –48

ವಿಜಯಪುರ; –42

ಯಾದಗಿರಿ; –35

ಗದಗ; –34

ಬಳ್ಳಾರಿ; –31

ಹಾವೇರಿ; –29

ಬೆಂಗಳೂರು ನಗರ; –27

ಕಲಬುರ್ಗಿ; –26

ಬೀದರ್‌; –23

ಕೋಲಾರ; –23

ಕೊಪ್ಪಳ; –20

ಬಾಗಲಕೋಟೆ; –18

ಚಿಕ್ಕಬಳ್ಳಾಪುರ; –18

ದಾವಣಗೆರೆ; –14

ಬೆಳಗಾವಿ; –12

ಧಾರವಾಡ; –12

ತುಮಕೂರು; –8

ರಾಮನಗರ; –6

ಉಡುಪಿ; –4

ಮಂಡ್ಯ; –2

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 6

  Sad
 • 1

  Frustrated
 • 1

  Angry

Comments:

0 comments

Write the first review for this !