ಭಾನುವಾರ, ನವೆಂಬರ್ 17, 2019
24 °C
ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಸೊಸೈಟಿಯಿಂದ ಪ್ರದಾನ

ಉಲ್ಲಾಸ ಕಾರಂತರಿಗೆ ಜಾರ್ಜ್‌ ಷಾಲರ್‌ ಜೀವಮಾನ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಸೊಸೈಟಿಯಿಂದ (ಡಬ್ಲ್ಯುಸಿಎಸ್‌) ನಿವೃತ್ತರಾಗುತ್ತಿರುವ ಡಾ.ಕೆ.ಉಲ್ಲಾಸ ಕಾರಂತ ಅವರಿಗೆ ವನ್ಯಜೀವಿ ಸಂರಕ್ಷಣಾ ವಿಜ್ಞಾನಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಸಂಸ್ಥೆಯ ವತಿಯಿಂದ ಜಾರ್ಜ್‌ ಷಾಲರ್‌ ಜೀವಮಾನ ಪ್ರಶಸ್ತಿ ನೀಡಲಾಗಿದೆ.

ಜಗತ್ತಿನ ಶ್ರೇಷ್ಠ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಣಾವಾದಿಗಳಲ್ಲಿ ಒಬ್ಬರಾದ ಜಾರ್ಜ್‌ ಷಾಲರ್‌ ಹೆಸರಿನಲ್ಲಿ ಡಬ್ಲ್ಯುಸಿಎಸ್‌ ಉದ್ಯೋಗಿಗಳಿಗೆ ನೀಡುವ ಈ ಪ್ರಶಸ್ತಿಗೆ, ವನ್ಯಜೀವಿ ಮತ್ತು ಅಭಯಾರಣ್ಯ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲಾಗುತ್ತದೆ.

ನ್ಯೂಯಾರ್ಕ್‌ನಲ್ಲಿ ಅ. 29ರಂದು ನಡೆದ ಸಮಾರಂಭದಲ್ಲಿ ಕಾರಂತ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಗೆ ಭಾಜನರಾದ ಮೊದಲ ವ್ಯಕ್ತಿ ಎಂಬ ಶ್ರೇಯ ಅವರದು. 

‘1988ರಿಂದ ಉಲ್ಲಾಸ ಅವರ ಜೊತೆ ಒಡನಾಟ ಹೊಂದಿದ್ದೇನೆ. ಅವರ ವೃತ್ತಿ ಜೀವನದ ಆರಂಭದಿಂದಲೂ ಅವರಿಗೆ ಮಾರ್ಗದರ್ಶಿಯಾಗಿದ್ದುದು ಹೆಮ್ಮೆಯ ವಿಚಾರ. ದೊಡ್ಡ ಮಾಂಸಾಹಾರಿ ಪ್ರಾಣಿಗಳ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಉಲ್ಲಾಸ ಕಾರಂತರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಜಾರ್ಜ್‌ ಷಾಲರ್‌ ಹೇಳಿದರು.

ಉಲ್ಲಾಸ ಅವರು 1988ರಲ್ಲಿ ಡಬ್ಲ್ಯುಸಿಎಸ್‌ ಸೇರಿದ್ದರು. ಥಾಯ್ಲೆಂಡ್‌, ಮಲೇಷ್ಯಾ, ಕಾಂಬೋಡಿಯಾ, ಲಾವೋ, ಬರ್ಮಾ, ಇಂಡೋನೇಷ್ಯಾ, ರಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ಹುಲಿಗಳ ಪರಿಸರ ವಿಜ್ಞಾನ ಕುರಿತ ಸಂಶೋಧನೆಗಳಿಗೆ ಅವರು ಮಾರ್ಗದರ್ಶನ ಮಾಡಿದ್ದರು. ನೂರಾರು ವೈಜ್ಞಾನಿಕ ಲೇಖನಗಳನ್ನು ಸಿದ್ಧಪಡಿಸಿದ್ದರು.

 

ಪ್ರತಿಕ್ರಿಯಿಸಿ (+)