ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರೇಗೌಡ ವಿರುದ್ಧ #MeToo ಆರೋಪ: ಎಲ್ಲ ಚಿತ್ರೋತ್ಸವಗಳಿಂದ ‘ಬಳೆಕೆಂಪ’ ಹೊರಕ್ಕೆ

ಚಿತ್ರ ನಿರ್ಮಾಣ ಸಂಸ್ಥೆಯಿಂದ ಫೇಸ್‌ಬುಕ್‌ನಲ್ಲಿ ಪ್ರಕಣೆ
Last Updated 24 ಅಕ್ಟೋಬರ್ 2018, 16:30 IST
ಅಕ್ಷರ ಗಾತ್ರ

ಬೆಂಗಳೂರು:‘ಬಳೆಕೆಂಪ’ ನಿರ್ದೇಶಕ ಈರೇಗೌಡ ವಿರುದ್ಧ ಅನಾಮಿಕ ಯುವತಿ #MeToo ಆರೋಪಮಾಡಿದ ಹಿನ್ನೆಲೆಯಲ್ಲಿ ಆ ಚಿತ್ರವನ್ನು ಎಲ್ಲ ಚಿತ್ರೋತ್ಸವಗಳಿಂದ ಹಿಂಪಡೆಯುತ್ತಿದ್ದೇವೆ ಎಂದು ಝೂ ಎಂಟರ್‌ಟೇನ್‌ಮೆಂಟ್ ಸಿನಿಮಾ ನಿರ್ಮಾಣ ಸಂಸ್ಥೆ ಹೇಳಿದೆ. ಈ ಕುರಿತು ಸಂಸ್ಥೆಯು ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದೆ.

‘#MeToo ಚಳವಳಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಎಲ್ಲರಿಗೂ ಸಮಾನತೆ ದೊರೆಯಬೇಕು ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ. ನಮ್ಮ ಸಮಾಜವನ್ನು ಸುರಕ್ಷಿತ ಮತ್ತು ಉತ್ತಮವಾಗಿ ಮಾಡುವ ನಿಟ್ಟಿನಲ್ಲಿ #MeToo ಜತೆ ನಾವಿದ್ದೇವೆ. ಆರೋಪ ಮಾಡಿರುವ ವ್ಯಕ್ತಿ ಅನಾಮಧೇಯರಾಗಿ ಉಳಿದುಕೊಳ್ಳಲು ಬಯಸಿರುವುದು ನಮಗೆ ತಿಳಿದಿದೆ. ಆರೋಪಕ್ಕೆ ಸಂಬಂಧಿಸಿ ಗೌಡ ಅವರು ಇನ್ನೂ ಯಾವುದೇ ಸ್ಪಷ್ಟನೆ ನೀಡದಿರುವುದನ್ನೂ ಅರ್ಥಮಾಡಿಕೊಂಡಿದ್ದೇವೆ.

ಆರೋಪದಿಂದ ಆಘಾತವಾಗಿರುವುದಲ್ಲದೆ, ಬೇಸರವೂ ಆಗಿದೆ. ಈರೇಗೌಡ ನಿರ್ದೇಶನದ ‘ಬಳೆಕೆಂಪ’ದ ನಿರ್ಮಾಪಕರಾಗಿ ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ನಾವು ಬಯಸಿದ್ದೇವೆ. ಈ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆ ಮತ್ತು ಮಾಹಿತಿ ದೊರೆಯುವವರೆಗೂ ಸದ್ಯದ ಮಟ್ಟಿಗೆ ಸಿನಿಮಾವನ್ನು ಎಲ್ಲ ಚಿತ್ರೋತ್ಸವಗಳಿಂದ ಹಿಂಪಡೆಯುತ್ತಿದ್ದೇವೆ’ ಎಂದುಝೂ ಎಂಟರ್‌ಟೇನ್‌ಮೆಂಟ್ ಫೇಸ್‌ಬುಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT