ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಯಲ್ಲಿ ಐದೂ ಸ್ಥಾನಗಳನ್ನು ಗೆಲ್ಲುತ್ತೇವೆ: ಎಚ್‌.ಡಿ.ಕುಮಾರಸ್ವಾಮಿ

ಚುನಾವಣಾ ಫಲಿತಾಂಶ ಸಮ್ಮಿಶ್ರ ಸರ್ಕಾರದ ಸಾಧನೆಗೆ ಅಳತೆಗೋಲು
Last Updated 15 ಅಕ್ಟೋಬರ್ 2018, 10:52 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯ ಫಲಿತಾಂಶ ಸರ್ಕಾರದ ಸಾಧನೆಗೆ ಜನತೆ ನೀಡುವ ತೀರ್ಪು ಆಗಲಿದ್ದು, ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಜೆ.ಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಬರುವ ಲೋಕಸಭಾ ಚುನಾವಣೆಗೆ ಉಪಚುನಾವಣೆ ಸೆಮಿಫೈನಲ್‌ ಆಗಿದ್ದು, ನಮ್ಮ ಗೆಲುವು ನಿಶ್ಚಿತ. ಆ ಬಳಿಕವಾದರೂ ಬಿಜೆಪಿ ಸರ್ಕಾರವನ್ನು ಉರುಳಿಸುವ ಆಟವನ್ನು ನಿಲ್ಲಿಸಲಿ’ ಎಂದು ಕುಟುಕಿದರು.

‘ಜೆಡಿಎಸ್‌– ಕಾಂಗ್ರೆಸ್ ಸರ್ಕಾರ ಪವಿತ್ರವೊ ಅಪವಿತ್ರವೊ ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಇದನ್ನು ಬಿಜೆಪಿ ಹೇಳಬೇಕಾಗಿಲ್ಲ. ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ನಾಡಿನ ಜನತೆ ಮೆಚ್ಚಿಕೊಂಡಿದ್ದಾರೆ. ನಾಡನ್ನು ಕಟ್ಟುವ ಸರ್ಕಾರ ನಮ್ಮದು. ಇದಕ್ಕೆ ಜನತೆಯ ಮನ್ನಣೆ ಇದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಈ ಹಂತದಲ್ಲಿ ಲೋಕಸಭೆ ಚುನಾವಣೆಯ ಅಗತ್ಯ ಇರಲಿಲ್ಲ. ಚುನಾವಣಾ ಆಯೋಗದ ತೀರ್ಮಾನವಾಗಿದ್ದು, ಅದನ್ನು ಒಪ್ಪಲೇ ಬೇಕಾಗಿದೆ. ಕಾಂಗ್ರೆಸ್‌ ಮತ್ತು ನಾವು ಒಟ್ಟಿಗೆ ಚರ್ಚಿಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಶಿವಮೊಗ್ಗ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ ಮಧುಬಂಗಾರಪ್ಪ ಅವನ್ನು ಕಣಕ್ಕೆ ಇಳಿಸಲಿದ್ದು, ನಾಳೆ(ಮಂಗಳವಾರ) ಅವರು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದರು.

ಶಿವಮೊಗ್ಗದಲ್ಲಿ ಮಧು ಅಭ್ಯರ್ಥಿ ಆಗಬೇಕು ಎಂಬುದು ದೈವ ನಿರ್ಣಯ. ಹೀಗಾಗಿ ಕಾಂಗ್ರೆಸ್‌ ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ. ಮಧು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರೆ ಅವರು ಮಂತ್ರಿ ಆಗಿರುತ್ತಿದ್ದರು ಎಂದರು.

‘ಮಂಡ್ಯದಲ್ಲಿ ಕಾಂಗ್ರೆಸ್‌ ಮುಖಂಡ ಚಲುವರಾಯಸ್ವಾಮಿ ಮುನಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿಸು ಸ್ವಲ್ಪ ದಿನ ಇರುತ್ತದೆ, ಬಳಿಕ ಎಲ್ಲವೂ ಸರಿ ಹೋಗುತ್ತದೆ. ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂಬುದು ಚಲುವರಾಯಸ್ವಾಮಿ ಅವರ ವೈಯಕ್ತಿಯ ಅಭಿಪ್ರಾಯವೇ ಹೊರತು ಕಾಂಗ್ರೆಸ್‌ ಪಕ್ಷದಲ್ಲ. ಕಾಂಗ್ರೆಸ್‌ ಬೆಂಬಲ ನಮಗೆ ನೀಡುತ್ತದೆ, ಅದು ಮುಖ್ಯ’ ಎಂದು ಕುಮಾರಸ್ವಾಮಿ ಹೇಳಿದರು.

‘ಅನಿತಾ ಅವರನ್ನು ರಾಮನಗರ ಕ್ಷೇತ್ರಕ್ಕೆ ಅಭ್ಯರ್ತಿ ಮಾಡಿದ್ದು, ಸ್ವಂತ ತೀರ್ಮಾನವಲ್ಲ. ನಾನು ಆ ಕ್ಷೇತ್ರಕ್ಕೆ ರಾಜಿನಾಮೆ ನೀಡುವ ಸಂದರ್ಭದಲ್ಲಿ ಅಲ್ಲಿ ಜನ ನಿಮ್ಮ ಕುಟುಂಬದವರೇ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಆಗ್ರಹಿಸಿದ್ದರು. ಜನರ ಆಸೆ ಮತ್ತು ಆಗ್ರಹದ ಮೇರೆಗೆ ಅನಿತಾಗೆ ಟಿಕೆಟ್‌ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT