ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಕ್ಷೇತ್ರವನ್ನೂ ಗೆಲ್ಲಿಸಿಕೊಡುತ್ತೇವೆ: ಬಿ.ಎಸ್‌.ಯಡಿಯೂರಪ್ಪ

Last Updated 14 ನವೆಂಬರ್ 2019, 23:49 IST
ಅಕ್ಷರ ಗಾತ್ರ

ಬೆಂಗಳೂರು: ‘ಅನರ್ಹ ಶಾಸಕರಿಗೆ ನಾವು ಕೊಟ್ಟ ಭರವಸೆಯನ್ನು ಪಾಲಿಸು ತ್ತೇವೆ. ನಂಬಿಕೆ ದ್ರೋಹ ಮಾಡುವುದಿಲ್ಲ’ ಎಂಬ ಬಿಜೆಪಿ ಮುಖಂಡರ ಸ್ಪಷ್ಟ ಭರವಸೆಯ ನಡುವೆ 16 ಮಂದಿ ಅನರ್ಹ ಶಾಸಕರುಗುರುವಾರ ಇಲ್ಲಿ ಬಿಜೆಪಿ ಸೇರಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಪಕ್ಷದ ಉಸ್ತುವಾರಿ ಮುರಳೀಧರ ರಾವ್ ಸಮ್ಮುಖದಲ್ಲಿ ಇಲ್ಲಿನ ಬಿಜೆಪಿ ಕಚೇರಿಯ ಮುಂಭಾಗ ನಿರ್ಮಿಸಿದ್ದ ವೇದಿಕೆಯಲ್ಲಿ 15 ಮಂದಿ ಪಕ್ಷ ಸೇರಿದರು. ಇನ್ನೊಬ್ಬ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಈಗಾಗಲೇ ಪಕ್ಷ ಸೇರಿದ್ದಾರೆ ಎಂದು ಪ್ರಕಟಿಸಲಾಯಿತು.

ಎಂ.ಟಿ.ಬಿ.ನಾಗರಾಜ್‌, ರೋಷನ್‌ ಬೇಗ್ ಹೊರತುಪಡಿಸಿ ಉಳಿದೆಲ್ಲ ಅನರ್ಹ ಶಾಸಕರೂ ಹಾಜರಿದ್ದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ, ಶಾಸಕ ಅರವಿಂದ ಲಿಂಬಾವಳಿ ಅವರು ಸಾಕ್ಷಿಯಾದರು.

ಭಾವಿ ಸಚಿವರು: ‘ಅನರ್ಹ ಶಾಸ ಕರುಭಾವಿ ಶಾಸಕರು, ಭಾವಿ ಸಚಿವರು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಘೋಷಣೆ ಕೂಗಿದರು. ’ಬಿಜೆಪಿಗೆ ಹೊಸಬರು, ಗೆಲುವು ಸಾಧ್ಯವೇ ಎಂದು ಕೆಲವರು ನನ್ನಲ್ಲಿ ಕೇಳಿದ್ದಾರೆ, ನೀವೇನೂ ಆತಂಕಪಡಬೇಡಿ, ನಮ್ಮ ಕಾರ್ಯಕರ್ತರು ನಿಮ್ಮನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದು ಭರವಸೆ ಕೊಟ್ಟಿದ್ದೇನೆ. 15 ಕ್ಷೇತ್ರವನ್ನೂ ನಾವು ಗೆಲ್ಲುವುದು ನಿಶ್ಚಿತ’ ಎಂದು ಯಡಿಯೂರಪ್ಪ ಹೇಳಿದರು.

‘ಇವರೆಲ್ಲ ತಮ್ಮ ಶಾಸಕ, ಸಚಿವ ಸ್ಥಾನ ತ್ಯಾಗ ಮಾಡಿದವರು. ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ನಂತರ ಇದೀಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಇವರನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಾರೂ ಒಡಕಿನ ಮಾತನಾಡದೆ ಶಕ್ತಿಮೀರಿ ಶ್ರಮಿಸಿ ಗೆಲ್ಲಿಸಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ಮಾಡಿದರು.

ಕಾಗವಾಡ ಕ್ಷೇತ್ರದ ಪಕ್ಷದ ಉಸ್ತುವಾರಿಗಳಲ್ಲಿ ಒಬ್ಬರಾಗಿ ಉಮೇಶ್‌ ಕತ್ತಿ, ಶಿವಾಜಿನಗರ ಕ್ಷೇತ್ರದ ಉಸ್ತುವಾರಿಗಳಲ್ಲಿ ಒಬ್ಬರಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ನೇಮಿಸಲಾಗಿದೆ. ಚುನಾವಣಾ ಫಲಿತಾಂಶ ಬಂದ ನಂತರ ನಗರದಲ್ಲಿ ಬೃಹತ್‌ ಸಮಾರಂಭ ಏರ್ಪಡಿಸಿ, ಒಂದು ಲಕ್ಷ ಜನರನ್ನು ಸೇರಿಸಿ, ಎಲ್ಲ ಶಾಸಕರನ್ನು ಸನ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ರಾಕ್ಷಸ ರಾಜಕಾರಣ ಕೊನೆಗಾಣಿಸಬೇಕು ಎಂದು ನಾವು ಆಯ್ಕೆಯಾದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು, ರಾಜ್ಯದಲ್ಲಿ ಆಗಿರುವುದು ಪಕ್ಷಾಂತರ ಅಲ್ಲ, ರಾಜಕೀಯ ಧ್ರುವೀಕರಣ ಎಂದು ಎಚ್.ವಿಶ್ವನಾಥ್‌ ಹೇಳಿದರು.

ಅಪವಿತ್ರ ಮೈತ್ರಿ ಸರ್ಕಾರದಲ್ಲಿ ನಮ್ಮ ಮನಸ್ಸುಗಳು ಒಂದಾಗಿರಲಿಲ್ಲ. ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಕೊಟ್ಟ ಭರವಸೆಗಳು ಈಡೇರುವುದಿಲ್ಲ ಎಂದು ಗೊತ್ತಾದಾಗ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಯಿತು. ಹೀಗಾಗಿ ಅಂತಃಕರಣದಿಂದ ಬಿಜೆಪಿ ಸೇರಿದ್ದೇನೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

ಅನರ್ಹ ಅಲ್ಲ: ಬಿಜೆಪಿ ನಾಯಕರು ವೇದಿಕೆಯಲ್ಲಿ ತಪ್ಪಿಯೂ ’ಅನರ್ಹ’ ಎಂಬ ಪದ ಬಳಸಲಿಲ್ಲ. ಈ ಮೊದಲು ಬಿಜೆಪಿಯಲ್ಲಿದ್ದ ಶಾಸಕರ ಹೆಸರನ್ನು ಕೂಗುತ್ತಿದ್ದಂತೆಯೇ ಪಕ್ಷದಲ್ಲಿ ಒಂದು ರೀತಿಯ ಪುಳಕವೂ ಕಾಣಿಸುತ್ತಿತ್ತು.

‘ಅನರ್ಹರು ಎಂದರೆ ಯೋಗ್ಯತೆ ಇಲ್ಲದವರೇ?’
ಬೆಂಗಳೂರು:
ಬಿಜೆಪಿ ಅನರ್ಹ ಶಾಸಕರ ಸೇರ್ಪಡೆ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಕಳುಹಿಸಿದ ಆಹ್ವಾನ ಪತ್ರದಲ್ಲಿ ಮಾಜಿ ಶಾಸಕರು ಎಂದು ನಮೂದಿಸುವ ಬದಲು ‘ಅನರ್ಹ ಶಾಸಕರು’ ಎಂದು ನಮೂದಿಸಿರುವುದು ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಬಿಜೆಪಿಯಲ್ಲಿ ಅರ್ಹರ ಬದಲು ಅನರ್ಹರಿಗೆ ಮಣೆ ಹಾಕಲಾಗುತ್ತದೆಯೇ. ಅರ್ಹರು ಎಂದರೆ ಯೋಗ್ಯರು. ಅನರ್ಹರು ಎಂದರೆ, ಯೋಗ್ಯತೆ ಇಲ್ಲದ ಅಯೋಗ್ಯರು ಎಂದಾಗುತ್ತದೆ’ ಎಂಬುದಾಗಿ ವ್ಯಾಖ್ಯಾನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT