ಗುರುವಾರ , ಡಿಸೆಂಬರ್ 5, 2019
19 °C

ಬಂಡಾಯ ಎದ್ದು ಅನರ್ಹರಾದ ಈ ಶಾಸಕರ ಆಸ್ತಿಯಲ್ಲಿ ಕೋಟಿ ಕೋಟಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಿರುವ ಕೆಲವು ಪ್ರಮುಖ ಅಭ್ಯರ್ಥಿಗಳ ಆಸ್ತಿ ಮೊತ್ತ 2018ಕ್ಕೆ ಹೋಲಿಸಿದರೆ ಈ ಸಲ ಕೋಟಿಗಟ್ಟಲೆ ಹೆಚ್ಚಳವಾಗಿರುವುದು ಕಂಡುಬಂದಿದೆ.

ಹೊಸಕೋಟೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಎಂ.ಟಿ.ಬಿ.ನಾಗರಾಜ್ ಆಸ್ತಿ ₹1,015 ಕೋಟಿಯಿಂದ ₹1,223 ಕೋಟಿಗೆ ಏರಿಕೆಯಾಗಿದ್ದು, ಒಟ್ಟಾರೆ ₹208 ಕೋಟಿ ಹೆಚ್ಚಳವಾಗಿದೆ. ಕಳೆದ ಆಗಸ್ಟ್‌ 2ರಿಂದ 7ರ ನಡುವೆ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 53 ಠೇವಣಿಗಳನ್ನು ಇರಿಸಿದ್ದಾರೆ. ಈ ಠೇವಣಿಯ ಒಟ್ಟು ಮೊತ್ತ ₹ 48.76 ಕೋಟಿಯಷ್ಟಾಗುತ್ತದೆ. ಇದೇ ಅವಧಿಯಲ್ಲಿ ಶಾಸಕರು ಬಂಡಾಯ ಎದ್ದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಆಸ್ತಿ 90.58 ಕೋಟಿಯಿಂದ ₹112.90 ಕೋಟಿಗೆ ಹೆಚ್ಚಳವಾಗಿದ್ದು, ಒಟ್ಟು ₹22.32 ಕೋಟಿ ಏರಿಕೆಯಾಗಿದೆ.

ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಕೆ.ಸಿ.ನಾರಾಯಣಗೌಡ ಆಸ್ತಿ ₹9.51 ಕೋಟಿಯಿಂದ ₹23.83 ಕೋಟಿಗೆ ಹೆಚ್ಚಳವಾಗಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಆಸ್ತಿ ₹14.14 ಕೋಟಿಯಿಂದ ₹18.29 ಕೋಟಿಗೆ ತಲುಪಿದೆ.

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಹೇಶ ಕುಮಠಳ್ಳಿ ಅವರ ಆಸ್ತಿ ಮೊತ್ತ ₹ 27 ಕೋಟಿಯಿಂದ ₹ 41 ಕೋಟಿಗೆ ಏರಿಕೆಯಾಗಿದೆ.

ಇದನ್ನೂ ಓದಿ:  ಆನಂದ್‌ ಸಿಂಗ್‌ ಆಸ್ತಿ ₹33ಕೋಟಿ ಏರಿಕೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು