ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿರುವ ಬಸವಣ್ಣನ ಪುತ್ಥಳಿ ಬಗ್ಗೆ ಏನು ಹೇಳಿದ್ದರು ಸಿದ್ದರಾಮಯ್ಯ?

ಪುತ್ಥಳಿ ಉದ್ಘಾಟನೆಗೆ ಕರೆಯಲು ಬಂದಿದ್ದ ನೀರಜ್‌ ಪಾಟೀಲ್‌ ಬಳಿ ಏನು ಹೇಳಿದ್ದರು? ಸಿ.ಟಿ ರವಿ ಟ್ವೀಟ್‌ನಲ್ಲಿದೆ ಉತ್ತರ 
Last Updated 23 ಜನವರಿ 2020, 5:43 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಇದಕ್ಕೆಲ್ಲ ಸಪೋರ್ಟ್ ಮಾಡುವುದಿಲ್ಲ ಇದೆಲ್ಲಾ ನೀವು ಬಿಜೆಪಿಯವರು ಮಾಡಿರುವುದು...' ಲಂಡನ್‌ನ ಲ್ಯಾಂಬರ್ಟ್‌ನಲ್ಲಿರುವ ಬಸವೇಶ್ವರರ ಪುತ್ಥಳಿ ಅನಾವರಣಕ್ಕೆ ಆಹ್ವಾನಿಸಲು ಬಂದಿದ್ದ ಲ್ಯಾಂಬರ್ಟ್‌ನ ಮೇಯರ್‌ ಆಗಿದ್ದ ನೀರಜ್‌ ಪಾಟೀಲ್‌ ಅವರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಹೇಳಿ ಕಳುಹಿಸಿದ್ದರು ಎಂದು ಸಚಿವ ಸಿ.ಟಿ ರವಿ ಅವರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ಲಂಡನ್‌ ಪ್ರವಾಸದಲ್ಲಿರುವ ಸಿ.ಟಿ ರವಿ ಅವರು ಬುಧವಾರ ಬಸವೇಶ್ವರರ ಪುತ್ಥಳಿ ಬಳಿಗೆ ತೆರಳಿ ಮಾಲಾರ್ಪಣೆ ಮಾಡಿದ್ದಾರೆ. ಇದೇ ವೇಳೆ ಅವರು ನೀರಜ್‌ ಪಾಟೀಲ್‌ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ನೀರಜ್‌ ಪಾಟೀಲ್‌ ತಮಗೆ ಸಿದ್ದರಾಮಯ್ಯ ಅವರ ಈ ಮಾತುಗಳನ್ನು ತಿಳಿಸಿದ್ದಾಗಿ ಸಿ.ಟಿ ರವಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಏನಿದೆ ರವಿ ಟ್ವೀಟ್‌ನಲ್ಲಿ?

ಪುತ್ಥಳಿ ಸ್ಥಾಪನೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದರು. ಅವರನ್ನು ಕರೆಯಲೆಂದು ನೀರಜ್ ಪಾಟೀಲ್ ಅವರು ಹೋಗಿದ್ದರಂತೆ. ಆಗ ಸಿದ್ದರಾಮಯ್ಯನವರು 'ನಾನು ಇದಕ್ಕೆಲ್ಲ ಸಪೋರ್ಟ್ ಮಾಡುವುದಿಲ್ಲ ಇದೆಲ್ಲಾ ನೀವು ಬಿಜೆಪಿಯವರು ಮಾಡಿರುವುದು' ಎಂದಿದ್ದರಂತೆ. ಬಸವೇಶ್ವರರ ಪುತ್ಥಳಿಯನ್ನು ಸಣ್ಣ ಮನಸ್ಸಿನಲ್ಲಿ ನೋಡಿದ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಬೇಸರ ಎಂದೆನಿಸಿತು. ರಾಜಕಾರಣದಲ್ಲಿ ನಾವೆಲ್ಲ ಬೇರೆ ಬೇರೆ ಪಕ್ಷ ಇರಬಹುದು, ಆದರೆ ಬಸವಣ್ಣನವರು ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಒಂದು ಜಾತಿಗೂ ಸೇರಿದವರಲ್ಲ,’ ಎಂದು ಅವರು ಬರೆದುಕೊಂಡಿದ್ದಾರೆ.

ಬಸವಣ್ಣನವರ ಪುತ್ಥಳಿ ಸ್ಥಾಪನೆಯ ಸಂದರ್ಭದಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಲ್ಲಿಗೆ ಹೋಗಬೇಕಾಗಿತ್ತು. ಅದು ಕರ್ನಾಟಕದ ಹೆಮ್ಮೆಯ ವಿಷಯ ಎಂದು ಪರಿಗಣಿಸಬೇಕಾಗಿತ್ತು. ಆದರೆ ಅದರಲ್ಲಿ ಸಣ್ಣತನ ಮಾಡಿ, ನೇರವಾಗಿಯೇ ನಾನು ಇದಕ್ಕೆಲ್ಲ ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಿದ ಮಾನಸಿಕತೆ ಕರ್ನಾಟಕದ ಗೌರವಕ್ಕೆ ಪೂರಕವಾಗಿ ಇರಲಿಲ್ಲ. ಸಿದ್ದರಾಮಯ್ಯ ಇಷ್ಟು ಸಣ್ಣತನದ ಮನಸ್ಸಿನವರು ಎಂದು ನೀರಜ್ ಪಟೇಲ್ ಅವರ ಮಾತುಗಳನ್ನು ಕೇಳಿದಾಗ ಬೇಸರ ಎಂದೆನಿಸಿತು. ನನ್ನ ಪ್ರಕಾರ ಈ ಬಸವಣ್ಣನವರ ಪುತ್ಥಳಿ ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಪ್ರತಿಮೆ ಕಂಡು ನನಗೆ ಅತ್ಯಂತ ಆನಂದವಾಗಿದೆ,’ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT