ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗಳೇ ಮದ್ಯ ಮಾರಾಟದ ಹಿಂದಿನ ದಂಧೆ ಏನು? ರಮೇಶ್‌ ಬಾಬು ಪ್ರಶ್ನೆ

Last Updated 9 ಮೇ 2020, 9:32 IST
ಅಕ್ಷರ ಗಾತ್ರ

ಬೆಂಗಳೂರು: ಸ್ವತಂತ್ರ ಬಂದು 20 ವರ್ಷಗಳ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೇಶದ ಅನೇಕ ರಾಜ್ಯದಲ್ಲಿ ನಿಷೇಧವಿದೆ ಅಂದರೆ ಇದು ಅನಿವಾರ್ಯವಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಗಳೇ ದಂಧೆ ಹಿಂದಿನ ದಂಧೆ ಏನು? ಪ್ರತಿದಿನ ನಿಮ್ಮ ಭಾವ ಚಿತ್ರದೊಂದಿಗೆ ಕೋವಿಡ್ ಮಾಹಿತಿ ನೀಡುವ ಸರ್ಕಾರ ಜೊತೆಯಲ್ಲಿ ಮದ್ಯದಿಂದ ಆಗುತ್ತಿರುವ ಸಾವು ಕೊಲೆ ಅಪರಾಧದ ಮಾಹಿತಿ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಕನ್ನಡ ಕಟ್ಟುವ ಕೆಲಸ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಗಬೇಕು. ಹಣದ ಕಾರಣ ನೀಡಿ ಅಧ್ಯಕ್ಷರು ವಿವಿಧ ಪ್ರಶಸ್ತಿ, ವಿದ್ಯಾರ್ಥಿ ವೇತನ ಸ್ಥಗಿತ ಎಂದಿದ್ದಾರೆ. ಪಲಾಯನವೇ ಇಲ್ಲಾ ಆತ್ಮ ವಂಚನೆಯೇ? ಸರ್ಕಾರ ಸಾಂಕೇತಿಕ. ನಿಮ್ಮ ಸಂಬಳ, ಸಾರಿಗೆ ಸಿಬ್ಬಂದಿ ಸವಲತ್ತು ಕಡಿತ ಮಾಡಿಕೊಳ್ಳಿ. ಅವಶ್ಯಕತೆ ಬಂದರೆ ಜೋಳಿಗೆ ಹಿಡಿಯಿರಿ. ಪ್ರಾಧಿಕಾರವು ಬೆಳಗಲಿ ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT