ಮಂಗಳವಾರ, ಡಿಸೆಂಬರ್ 10, 2019
17 °C

ಬಿಳಿಜೋಳ: ಕ್ವಿಂಟಲ್‌ಗೆ ₹4,850 ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಜನರ ಪ್ರಮುಖ ಆಹಾರ ಧಾನ್ಯ ಬಿಳಿ ಜೋಳದ ದರ ದಿಢೀರ್‌ ಏರಿಕೆಯಾಗಿದೆ. ಕಲಬುರ್ಗಿ ಎಪಿಎಂಸಿಯಲ್ಲಿ ಮಂಗಳವಾರ ಪ್ರತಿ ಕ್ವಿಂಟಲ್‌ಗೆ ₹4,850 ದರಕ್ಕೆ ಮಾರಾಟವಾಯಿತು. 

ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಮುಂಗಾರು ಜೋಳದ ಇಳುವರಿ ಗಣನೀಯವಾಗಿ ಕುಸಿದಿದೆ. ಹೀಗಾಗಿ, ಕಡಿಮೆ ಜೋಳ ಬೆಳೆಯುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬೇಡಿಕೆ ಹೆಚ್ಚಿದೆ. ಕಲಬುರ್ಗಿ ಎಪಿಎಂಸಿಗೆ ಪ್ರತಿ ವರ್ಷ ವಿಜಯಪುರದ ಜೋಳವೇ ಆಧಾರ. ಆದರೆ, ಮಹಾರಾಷ್ಟ್ರದಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಹೆಚ್ಚು ರೈತರು ಹಾಗೂ ಸಗಟು ವ್ಯಾಪಾರಿಗಳು ಅಲ್ಲಿಗೆ ಸರಬರಾಜು ಮಾಡುತ್ತಿದ್ದಾರೆ. ಕಾರಣ, ಮುಂದಿನ ವಾರ ಪ್ರತಿ ಕ್ವಿಂಟಲ್‌ಗೆ ದರ ಇನ್ನೂ ₹ 1ಸಾವಿರವರೆಗೆ ಏರಿಕೆ ಆಗಬಹುದು ಎನ್ನುತ್ತಾರೆ ವರ್ತಕರು.

ಬಿಳಿ ಜೋಳದ ಚಿಲ್ಲರೆ ವ್ಯಾಪಾರ ದರ ಪ್ರತಿ ಕೆ.ಜಿಗೆ ₹50 ಇದೆ.

ಪ್ರತಿಕ್ರಿಯಿಸಿ (+)