ಮಂಗಳವಾರ, ಆಗಸ್ಟ್ 20, 2019
27 °C

ಅತೃಪ್ತರು ಸರ್ಕಾರ ಬೆಂಬಲಿಸಿದರೆ ರೇವಣ್ಣ ರಾಜೀನಾಮೆಗೆ ಪ್ರಯತ್ನಿಸುವೆ

Published:
Updated:

ಹೊಳೆನರಸೀಪುರ: ‘ಅತೃಪ್ತ ಶಾಸಕರು ಹಿಂದಿರುಗಿ ಬಂದು ಮೈತ್ರಿ ಸರ್ಕಾರವನ್ನು ಉಳಿಸುವುದಾದರೆ ಎಚ್‌.ಡಿ.ರೇವಣ್ಣ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಪ್ರಯತ್ನಿಸುವೆ’ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹಳ್ಳಿಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರದ ಈ ಪರಿಸ್ಥಿತಿಗೆ ರೇವಣ್ಣ ಒಬ್ಬರೇ ಕಾರಣ ಅಲ್ಲ. ಉತ್ಸಾಹದಿಂದ ಕೆಲಸ ಮಾಡುವ ಸಮಯದಲ್ಲಿ ಕೆಲ ತಪ್ಪುಗಳು ಆಗಿರಬಹುದು. ಅವರೇ ಕಾರಣ ಎಂದು ಶಾಸಕರು ಭಾವಿಸಿದ್ದರೆ ರೇವಣ್ಣ ಅವರಿಂದ ರಾಜೀನಾಮೆ ಕೊಡಿಸಲು ನಾನು ಯತ್ನಿಸುತ್ತೇನೆ’ ಎಂದರು.

Post Comments (+)