ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವಣಿ ಹೆಂಚು ತೆಗೆದು ಯುವತಿಯರು ಪರಾರಿ

Last Updated 12 ಮಾರ್ಚ್ 2020, 2:26 IST
ಅಕ್ಷರ ಗಾತ್ರ

ಕಾರವಾರ: ನಗರದಸ್ವೀಕಾರ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದ ಇಬ್ಬರು ಯುವತಿಯರು ಮಂಗಳವಾರ ರಾತ್ರಿ ಚಾವಣಿಯ ಹೆಂಚು ತೆಗೆದು ಪರಾರಿಯಾಗಿದ್ದಾರೆ. ಈ ಬಗ್ಗೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಯುವತಿಯರು ಸ್ವೀಕಾರ ಕೇಂದ್ರಕ್ಕೆ ದಾಖಲಾಗಿದ್ದರು.ಒಬ್ಬಳುಎರಡು ತಿಂಗಳು ಹಾಗೂಇನ್ನೊಬ್ಬಳುಒಂದೂವರೆ ತಿಂಗಳಿನಿಂದಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ರಾತ್ರಿ ಶೌಚಾಲಯದ ಚಾವಣಿಗೆ ಅಳವಡಿಸಲಾದ ಹೆಂಚುಗಳನ್ನು ತೆಗೆದು ತಪ್ಪಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ತಿಳಿಸಿದ್ದಾರೆ.

ಸ್ವೀಕಾರ ಕೇಂದ್ರಗಳು: ಸ್ವೀಕಾರ ಕೇಂದ್ರಗಳು ಅಲ್ಪಾವಧಿ ವಸತಿಗಾಗಿ ಇದ್ದು, ವಿಧವೆಯರು, ನಿರ್ಗತಿಕರು, ಪರಿತ್ಯೆಕ್ತ ಮಹಿಳೆಯರು, ಸ್ವಯಂ ಪ್ರೇರಿತರಾಗಿ ಬಂದಲ್ಲಿ ಅವರಿಗೆ ತಾತ್ಕಾಲಿಕ ಆಶ್ರಯವನ್ನು ನೀಡಲಾಗುತ್ತದೆ.ಅವರಿಗೆ ಸೂಕ್ತ ಪುನರ್ ವಸತಿ ಕಲ್ಪಿಸುವವರೆಗೂ ಆಶ್ರಯ ನೀಡಲಾಗುತ್ತದೆ. ಸ್ವೀಕಾರ ಕೇಂದ್ರದಲ್ಲಿ ಅವರಿಗೆ ಪಾಲನೆ, ಆಶ್ರಯ, ರಕ್ಷಣೆ, ನೈತಿಕ ಶಿಕ್ಷಣ, ದೈಹಿಕ ಶಿಕ್ಷಣ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಹಮ್ಮಿಕೊಳ್ಳಲಾಗುತ್ತದೆ. ಹಾಗೂ ಅವರಿಗೆ ಸರ್ಕಾರದಿಂದ ನಿಗದಿಪಡಿಸಿದ ಪ್ರಮಾಣದಂತೆ ಆಹಾರ ಹಾಗೂ ವಸ್ತ್ರಗಳನ್ನು ಒದಗಿಸಲಾಗುತ್ತದೆ. ಪೋಷಣೆ ಮತ್ತು ಆಶ್ರಯದ ಅಗತ್ಯವಿರುವ ಹಾಗೂ ಅನೈತಿಕ ವ್ಯವಹಾರ ಅಧಿನಿಯಮದ ಮೇರೆಗೆ ಬರುವ ಬಾಲಕಿಯರು ಮತ್ತು ಮಹಿಳೆಯರನ್ನು ಸ್ವೀಕರಿಸಿ ಗರಿಷ್ಠ 06 ತಿಂಗಳವರೆಗೆ ಕೇಂದ್ರದಲ್ಲಿ ಇಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT