ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಆಟೊದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

Last Updated 18 ಏಪ್ರಿಲ್ 2020, 15:30 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ವೇಳೆಯೇ ಗರ್ಭಿಣಿಯೊಬ್ಬರಿಗೆ ಆಟೊದಲ್ಲಿಯೇ ಹೆರಿಗೆ ಆದ ಘಟನೆ ಶನಿವಾರ ಬೆಳಿಗ್ಗೆ ಇಲ್ಲಿನ ಶಹಾಪುರದಲ್ಲಿ ನಡೆದಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಹಾಪುರದ ಖಾಸಗಿ ಪ್ರಸೂತಿ ಆಸ್ಪತ್ರೆಯೊಂದು ಬಂದ್‌ ಆಗಿತ್ತು. ಅದಕ್ಕೆ ಗರ್ಭಿಣಿಯನ್ನು ಹತ್ತಿರದ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಸೌಲಭ್ಯಗಳಿಲ್ಲ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿನ ಸಿಬ್ಬಂದಿಗಳು ಹೇಳಿದರೆನ್ನಲಾಗಿದೆ.

ಬೇರೊಂದು ಆಸ್ಪತ್ರೆಗೆ ಆಟೊದಲ್ಲಿ ತೆರಳುತ್ತಿದ್ದ ವೇಳೆ, ಗರ್ಭಿಣಿಗೆ ಪ್ರಸವ ವೇದನೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಆಗ ರಸ್ತೆಯಲ್ಲಿಯೇ ಆಟೊ ನಿಲ್ಲಿಸಿ, ಅಕ್ಕಪಕ್ಕದ ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆ ಹಾಗೂ ಮಗುವನ್ನು ಟಿಳಕವಾಡಿಯ ಆಸ್ಪತ್ರೆಯೊಂದರಲ್ಲಿ ಸೇರಿಸಿದರು.

ಘಟನೆ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್‌.ವಿ. ಮುನ್ಯಾಳ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಭೆಯಲ್ಲಿದ್ದೇನೆ ನಂತರ ಮಾತನಾಡುವೆ ಎಂದ್ಹೇಳಿ ದೂರವಾಣಿ ಕಡಿತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT