ಶುಕ್ರವಾರ, ಡಿಸೆಂಬರ್ 6, 2019
20 °C

ಶಿರಸಿಯಲ್ಲಿ ನಾಲ್ವರು ಮಕ್ಕಳನ್ನು ಹಡೆದ ಮಹಾತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ಕೌಮುದಿ ನರ್ಸಿಂಗ್‌ ಹೋಂನಲ್ಲಿ, ಶಿರಸಿಯ 28 ವರ್ಷದ ಮಹಿಳೆಯೊಬ್ಬರು ಶನಿವಾರ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಅವರ ಚೊಚ್ಚಲ ಹೆರಿಗೆಯಾಗಿದೆ.

ಎರಡು ಹೆಣ್ಣು ಹಾಗೂ ಒಂದು ಗಂಡು ಮಗು ಆರೋಗ್ಯವಾಗಿದ್ದು, ಇನ್ನೊಂದು ಮಗು ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿದೆ. ಮೂವರು ಮಕ್ಕಳಿಗೆ ಹಾಗೂ ತಾಯಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ.

‘ನಮ್ಮ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನನ ಹಲವು ಬಾರಿಯಾಗಿದೆ. ಆದರೆ, ನಾಲ್ವರು ಮಕ್ಕಳ ಜನನ ಆಗಿರುವುದು ಇದೇ ಮೊದಲು’ ಎಂದು ಹೆರಿಗೆ ಮಾಡಿಸಿರುವ ಡಾ.ಜಿ.ಎಂ.ಹೆಗಡೆ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು