ಮಂಗಳೂರು: ದುಷ್ಕರ್ಮಿಗಳು ಕತ್ತರಿಸಿ ತಂದು ಎಸೆದಿರುವ ಮಹಿಳೆಯ ರುಂಡ, ಮುಂಡ ಪತ್ತೆ

ಶುಕ್ರವಾರ, ಮೇ 24, 2019
29 °C

ಮಂಗಳೂರು: ದುಷ್ಕರ್ಮಿಗಳು ಕತ್ತರಿಸಿ ತಂದು ಎಸೆದಿರುವ ಮಹಿಳೆಯ ರುಂಡ, ಮುಂಡ ಪತ್ತೆ

Published:
Updated:
Prajavani

ಮಂಗಳೂರು: ಮಹಿಳೆಯೊಬ್ಬರ ರುಂಡ ಮತ್ತು ಮುಂಡ ಸೇರಿದಂತೆ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ತಂದಿರುವ ದುಷ್ಕರ್ಮಿಗಳು, ಕದ್ರಿ ಉದ್ಯಾನದ ಬಳಿಯ ಗೂಡಂಗಡಿ ಮತ್ತು ನಂದಿಗುಡ್ಡ ಸ್ಮಶಾನದ ಬಳಿ ಎಸೆದು ಹೋಗಿದ್ದಾರೆ.

ಭಾನುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ತೆಯಾದ‌ ಶವದ ತುಂಡುಗಳ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಪೊಲೀಸರು, ಕೊಲೆಯಾದ ಮಹಿಳೆಯ ಗುರುತು ಪತ್ತೆ ಮಾಡಿದ್ದಾರೆ. ಮಂಗಳೂರಿನ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಕೊಲೆಯಾದ ಮಹಿಳೆ ಎಂಬುದು ಖಚಿತಪಡಿಸಿದ್ದಾರೆ.

ಕದ್ರಿ ಉದ್ಯಾನದ ಬಳಿಯ ಗೂಡಂಗಡಿ ಎದುರಿನಲ್ಲಿ ಪ್ಲಾಸ್ಟಿಕ್‌ ಚೀಲವೊಂದರಲ್ಲಿ ಮಹಿಳೆಯ ರುಂಡವನ್ನು ಇರಿಸಿ ಪರಾರಿಯಾಗಿದ್ದಾರೆ. ಪಕ್ಕದಲ್ಲೇ ಒಂದು ಹೆಲ್ಮೆಟ್ ಕೂಡ ಪತ್ತೆಯಾಗಿದೆ. ನಂದಿಗುಡ್ಡೆ ಸ್ಮಶಾನದ ಬಳಿ ಕುತ್ತಿಗೆಯಿಂದ ಸೊಂಟದವರೆಗಿನ ಭಾಗಗಳು ಮಾತ್ರ ಇರುವ ಮುಂಡ ಪತ್ತೆಯಾಗಿದೆ. ಈ ಎಲ್ಲ ಭಾಗಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಮೃತ ಮಹಿಳೆಯು 30ರಿಂದ 35 ವರ್ಷದೊಳಗಿನ ವಯಸ್ಸಿನವರಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಹಿಳೆಯ ಕೈಗಳು ಮತ್ತು ಕಾಲುಗಳ ಭಾಗಗಳು ಇನ್ನೂ ಪತ್ತೆಯಾಗಿಲ್ಲ. ನಂದಿಗುಡ್ಡೆ ಸ್ಮಶಾನದ ಬಳಿ ಮುಂಡ ಪತ್ತೆಯಾದ ಸ್ಥಳದ ಸಮೀಪದಲ್ಲೇ ಒಂದು ಬುರ್ಖಾ ಪತ್ತೆಯಾಗಿದೆ.

ಮಹಿಳೆಯನ್ನು ಬೇರೆಲ್ಲೋ ಕೊಲೆ ಮಾಡಿ ತಂದು ಮೃತದೇಹವನ್ನು ಕತ್ತರಿಸಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕದ್ರಿ ಉದ್ಯಾನದ ಬಳಿಯ ಗೂಡಂಗಡಿ ಸಮೀಪ ಭಾನುವಾರ ನಸುಕಿನ ಜಾವ ಸ್ಕೂಟರ್‌ ಒಂದು ಬಂದು ಹೋಗಿರುವುದು ಸನಿಹದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಗಳೂರು ಪೂರ್ವ (ಕದ್ರಿ) ಮತ್ತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ  ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಕೊಲೆಯಾದ ಮಹಿಳೆಯ ಗುರುತು ಪತ್ತೆ

ಪತ್ತೆಯಾದ‌ ಶವದ ತುಂಡುಗಳ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಪೊಲೀಸರು, ಕೊಲೆಯಾದ ಮಹಿಳೆಯ ಗುರುತು ಪತ್ತೆ ಮಾಡಿದ್ದಾರೆ.

'ಮಂಗಳೂರಿನ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಕೊಲೆಯಾದ ಮಹಿಳೆ ಎಂಬುದು ಖಚಿತವಾಗಿದೆ. ಮೃತ ಮಹಿಳೆ ವಿಚ್ಛೇದಿತೆಯಾಗಿದ್ದರು. ಆಕೆಯ ವಿಚ್ಛೇದಿತ ಪತಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ' ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ವೈಯಕ್ತಿಕ ದ್ವೇಷದಿಂದ ಮಹಿಳೆಯನ್ನು ಕೊಲೆ‌ ಮಾಡಿ, ಶವವನ್ನು ಕತ್ತರಿಸಿ ಎಸೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 8

  Sad
 • 0

  Frustrated
 • 8

  Angry

Comments:

0 comments

Write the first review for this !