ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿ ಹೋದ ಮಹಿಳೆ

Published:
Updated:
Prajavani

ಅಥಣಿ (ಬೆಳಗಾವಿ ಜಿಲ್ಲೆ) : ಇಲ್ಲಿಗೆ ಸಮೀಪದ ಜನವಾಡ ಗ್ರಾಮದ ಶೋಭಾ ಬಾಳಪ್ಪ ಸುತಾರ (40) ಮನೆಯಲ್ಲಿದ್ದ ಸಾಮಗ್ರಿಗಳನ್ನು ಶನಿವಾರ ಬೇರೆಡೆ ಸಾಗಿಸುವಾಗ ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಕಳೆದ ತಿಂಗಳು ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಶೋಭಾ ಅವರು ತಮ್ಮ ಮನೆ ತೊರೆದು, ಸಮೀಪದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಈಗ ಪುನಃ ನದಿ ನೀರು ಹೆಚ್ಚಳವಾಗುತ್ತಿರುವುದರಿಂದ ಮನೆಯಲ್ಲಿದ್ದ ಸಾಮಗ್ರಿಗಳನ್ನು ಬೇರೆಡೆ ಸಾಗಿಸಲು ಹೋಗಿದ್ದರು.

ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)