ಪೊಲೀಸ್ ಎಂದು ಸೇನೆಗೆ ಸೇರಿದ!

ಮಂಗಳವಾರ, ಮಾರ್ಚ್ 19, 2019
33 °C

ಪೊಲೀಸ್ ಎಂದು ಸೇನೆಗೆ ಸೇರಿದ!

Published:
Updated:
Prajavani

ರಾಮನಗರ: ‘ಮಗ ರಿಸರ್ವ್‌ ಪೊಲೀಸ್‌ ಕೆಲಸಕ್ಕೆ ಸೇರುತ್ತಿದ್ದೀನಿ ಎಂದು ನಮಗೆಲ್ಲ ಸುಳ್ಳು ಹೇಳಿ ಸಂದರ್ಶನಕ್ಕೆ ಹೋಗಿದ್ದ. ಕೆಲಸಕ್ಕೆ ಆಯ್ಕೆಯಾಗಿ ಒಂದು ವರ್ಷ ತರಬೇತಿ ಮುಗಿಸಿ ಬಂದಾಗಲೇ ನಮಗೆ ಗೊತ್ತಾಗಿದ್ದು ಅವನು ಮಿಲಿಟ್ರಿಗೆ ಸೇರಿದ್ದಾನೆ ಅಂತ’

–ಹೀಗೆಂದು ಮಗ 13 ವರ್ಷಗಳ ಹಿಂದೆ ಸೇನೆಗೆ ಸೇರಿದ ಘಟನೆಯನ್ನು ಹಂಚಿಕೊಂಡರು ರಾಮನಗರದ ರಾಯ ರದೊಡ್ಡಿ ನಿವಾಸಿ ಚೆನ್ನಮ್ಮ. ಅವರು ಹಾಗೂ ಪತಿ ಶಿವಲಿಂಗಯ್ಯ ದಿನಗೂಲಿ ದುಡಿಮೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರ ಪುತ್ರ ಶಿವರಾಜು ಬಿಎಸ್‌ಎಫ್‌ ಯೋಧರಾಗಿದ್ದು, ಸದ್ಯ ಮಧ್ಯಪ್ರದೇಶದಲ್ಲಿ ಸೇವೆಯಲ್ಲಿದ್ದಾರೆ.

‘ನಮಗಿರುವುದು ಒಬ್ಬನೇ ಮಗ. ಆತನಿಗೆ ಇನ್ನೂ 7 ವರ್ಷ ಸೇವೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಇದೆ. ನಾವು ಹತ್ತಿರಕ್ಕೆ ವರ್ಗ ಮಾಡಿಸಿಕೋ ಎಂದರೆ, ಆತ ಮತ್ತೆ ಜಮ್ಮು– ಕಾಶ್ಮೀರಕ್ಕೆ ಹೋಗುವುದಾಗಿ ಹೇಳುತ್ತಾನೆ. ಅವನೊಳಗಿನ ಉತ್ಸಾಹ ಹಾಗೆಯೇ ಇದೆ. ಅವನೆಂದರೆ ನಮಗೆ ಹೆಮ್ಮೆ’ ಎಂದು ಮಾತು ಮುಗಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !