ನಾನು ರಾಜ್ಯಾಧ್ಯಕ್ಷನಾಗಿದ್ದೇ 2018ರ ವಿಸ್ಮಯ!

7

ನಾನು ರಾಜ್ಯಾಧ್ಯಕ್ಷನಾಗಿದ್ದೇ 2018ರ ವಿಸ್ಮಯ!

Published:
Updated:
Deccan Herald

ಮೈಸೂರು: ‘ನನ್ನ ಗೆಳೆಯರು 2018ರ ವಿಸ್ಮಯವೇನು ಎಂದು ಕೇಳುತ್ತಿದ್ದರು. ಅವರಿಗೆ ನಾನು ಈಗ ಹೇಳುತ್ತಿರುವ ಉತ್ತರವೇನು ಗೊತ್ತೆ? ನಾನು ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿದ್ದೇ ದೊಡ್ಡ ವಿಸ್ಮಯ ಎಂದು!...’

ಹೀಗೆ, ಅಡಗೂರು ಎಚ್‌.ವಿಶ್ವನಾಥ್‌ ಅವರು ಚಟಾಕಿ ಹಾರಿಸಿದ್ದು ಭಾನುವಾರ ಮೈಸೂರಿನ‌ಲ್ಲಿ ನಡೆದ ಪ್ರಕಾಶಕ ಡಿ.ಎನ್.ಲೋಕಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ. ‘2018ರಲ್ಲಿ ಅನೇಕ ಘಟನೆ ಸಂಭವಿಸಿವೆ. ಅವುಗಳಲ್ಲೆಲ್ಲಾ ಈ ಘಟನೆಯೇ ಹೆಚ್ಚು ವಿಸ್ಮಯಕಾರಿಯಾದುದು’ ಎಂದರು.

‘ಎಚ್‌.ಡಿ.ದೇವೇಗೌಡರು ಜೆಡಿಎಸ್‌ ಸಭೆಗೆ ನಮ್ಮೆಲ್ಲರನ್ನೂ ಆಹ್ವಾನಿಸಿದ್ದರು. ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು. ಅವಕ್ಕಾದ ನಾನು ಯಾರನ್ನು ಕುರಿತು ಇವರು ಹೇಳುತ್ತಿದ್ದರೆಂದು ಅಕ್ಕ– ಪಕ್ಕ ನೋಡಿದೆ. ಅಲ್ಲಿ ಬೇರಾವ ವಿಶ್ವನಾಥನೂ ಇರಲಲ್ಲ. ಆಗಲೇ ನನಗೆ ವಿಚಾರ ಖಚಿತವಾಗಿದ್ದು’ ಎಂದು ಹೇಳಿದರು.

ರಾಜಕೀಯದಲ್ಲಿ ನಂಬಿಕೆಯೇ ದೇವರು. ದೇವೇಗೌಡರ ವಿಶ್ವಾಸಾರ್ಹತೆ ಅದರಿಂದ ರಾಜ್ಯಕ್ಕೆ ಸಾಬೀತಾಯಿತು ಎಂದು ವಿಶ್ಲೇಷಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !