ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್ ಆರೋಗ್ಯ ಗಂಭೀರ

ಸೋಮವಾರ, ಮೇ 27, 2019
33 °C
ಶ‌ಸ್ತ್ರಚಿಕಿತ್ಸೆ ನಡೆಸಿ ಹೃದಯಕ್ಕೆ ತಾತ್ಕಾಲಿಕ ‘ಪೇಸ್‌ಮೇಕರ್‌’ ಅಳವಡಿಸಿದ ವೈದ್ಯರು

ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್ ಆರೋಗ್ಯ ಗಂಭೀರ

Published:
Updated:
Prajavani

ಮೈಸೂರು: ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಅವರಿಗೆ ಶುಕ್ರವಾರ ಸಂಜೆ ತೀವ್ರ ಹೃದಯಾಘಾತವಾಗಿದ್ದು, ಇಲ್ಲಿನ ಸುಯೋಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಜೆ ಕುವೆಂಪುನಗರದ ತಮ್ಮ ನಿವಾಸದ ಬಳಿ ವಾಯುವಿಹಾರ ಮಾಡುತ್ತಿದ್ದಾಗ ಪ್ರೊ.ಭಗವಾನ್‌ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತಾತ್ಕಾಲಿಕ ‘ಪೇಸ್‌ ಮೇಕರ್‌’ ಸಾಧನವನ್ನು ಅಳವಡಿಸಿದ್ದಾರೆ.

‘ಗೋಲ್ಡನ್ ಅವರ್‌’ (ಚಿಕಿತ್ಸೆಗೆ ಸ್ಪಂದಿಸುವ ಹಂತ) ನಲ್ಲಿ ಭಗವಾನ್‌ ಅವರನ್ನು ಕರೆತಂದ ಕಾರಣದಿಂದ ಬದುಕಿಸಲು ಸಾಧ್ಯವಾಯಿತು. ಹೃದಯ ಬಡಿತ ತೀರಾ ಕ್ಷೀಣವಾಗಿತ್ತು. ಅವರ ಆರೋಗ್ಯವನ್ನು ಸ್ಥಿರಗೊಳಿಸಿ ಶಸ್ತ್ರಚಿಕಿತ್ಸೆ ನಡೆಸಿದೆವು. ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದೆ’ ಎಂದು ಸುಯೋಗ್‌ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್‌.ಪಿ.ಯೋಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !