ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಸಿಇಟಿ ಪರೀಕ್ಷೆ, ಹೋಬಳಿಗೊಂದು ಪಬ್ಲಿಕ್ ಸ್ಕೂಲ್ ಸ್ಥಾಪನೆಯ ಘೋಷಣೆ

Last Updated 8 ಫೆಬ್ರುವರಿ 2019, 10:04 IST
ಅಕ್ಷರ ಗಾತ್ರ

ಬೆಂಗಳೂರು: ಸಿಇಟಿ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸುವ ಮತ್ತು ಆಧಾರ್ ಆಧರಿತ ಡಿಜಿಟಲ್ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ ಆನ್‌ಲೈನ್ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರದ ಬಜೆಟ್‌ ಭಾಷಣದಲ್ಲಿ ಹೇಳಿದರು.

ಆನ್‌ಲೈನ್‌ ಸಿಇಟಿ ಪರೀಕ್ಷೆ ಕುರಿತು ಭಾಷಣದಲ್ಲಿ ಹೆಚ್ಚು ವಿವರ ಇರಲಿಲ್ಲ. ಆದರೆಆಧಾರ್ ಆಧರಿತ ಅಂಕಪಟ್ಟಿ ವಿತರಣೆಗೆ ₹ 2 ಕೋಟಿ ಅನುದಾನ ಮೀಸಲಿಡುವುದಾಗಿ ಘೋಷಿಸಿದರು. ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯನ್ನು ಮರುವಿಂಗಡಿಸಿ, ಹಾಸನದಲ್ಲಿ ಹೊಸ ತಾಂತ್ರಿಕ ವಿ.ವಿ. ಸ್ಥಾಪಿಸಲಾಗುವುದು ಎಂದು ಹೇಳಿದರು.

ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿಯೂ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗವತಿಯವರೆಗೆ ಒಂದೇಸೂರಿನಡಿ ಶಿಕ್ಷಣ ಒದಗಿಸುವ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪಿಸಲಾಗುವುದು. ಇದಕ್ಕೆ ಕೇಂದ್ರೀಯ ವಿದ್ಯಾಲಯ ಮಾದರಿ ಎಂಬುದು ಈ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಘೋಷಣೆಯಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಜೆಟ್‌ ಭಾಷಣದಲ್ಲಿ ಪ್ರಸ್ತಾವವಾದ ಮುಖ್ಯ ಅಂಶಗಳು ಇಂತಿವೆ...

* ಸುಭದ್ರ ಶಾಲೆ ಯೋಜನೆಯಡಿ ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ ₹90 ಕೋಟಿ ವೆಚ್ಚದಲ್ಲಿ ಕಾಂಪೌಂಡ್.

* ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡಲು ಶಾಲಾ ಮಕ್ಕಳಿಗೆ ₹638 ಕೋಟಿ ಮತ್ತು ಅಂಗನವಾಡಿ ಮಕ್ಕಳಿಗೆ ₹405 ಕೋಟಿ ಮೀಸಲು.

* 1500 ಹೊಸ ಶಾಲಾ ಕೊಠಡಿ, 5000 ಶಾಲಾ ಕೊಠಡಿಗಳ ಉನ್ನತೀಕರಣ, 1000 ಶಾಲೆಗಳಿಗೆ ಕಲಿಕಾ ಉಪಕರಣ ಹಾಗೂ ಶಾಲಾ ಕಟ್ಟಡಗಳ ನಿರ್ವಹಣೆಗೆಎಸ್ಟೇಟ್ ಅಧಿಕಾರಿ ನೇಮಕ.

* ‘ಗುರುಚೇತನ’ ಕಾರ್ಯಕ್ರಮದಡಿ 1 ಲಕ್ಷ ಶಿಕ್ಷಕರಿಗೆ 10 ದಿನಗಳ ತರಬೇತಿ.ಟೀಚರ್–ಮೆಂಟರ್ ಕಾರ್ಯಕ್ರಮದ ಮೂಲಕ ಶಿಕ್ಷಕರಲ್ಲಿ ಅರಿವು ಮೂಡಿಸಲು ಕ್ರಮ.

* ಆರ್‌ಟಿಇ ಕಾಯ್ದೆಯಡಿ ರಚಿಸಲಾಗಿರುವ ಮೇಲುಸ್ತುವಾರಿ ಸಮಿತಿಗಳಿಗೆ ಹೆಚ್ಚಿನ ಹೊಣೆಗಾರಿಕೆ. ಪ್ರತಿ ಶಿಕ್ಷಣ ವಲಯದಲ್ಲಿ ಶಾಲೆಗಳ ರಿಪೋರ್ಟ್ ಕಾರ್ಡ್‌ ತಯಾರಿ, ಶಿಕ್ಷಕ–ಪಾಲಕ ಸಭೆಯ ಚರ್ಚೆಯ ಅನ್ವಯ ಶಾಲೆಗಳ ಗುಣಮಟ್ಟ ಹೆಚ್ಚಳಕ್ಕೆ ಕ್ರಮ.

* ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳಲ್ಲಿ ಆಲೂರು ವೆಂಕಟರಾವ್ ಹೆಸರಿನಲ್ಲಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಭಾಷಾ ಕೌಶಲ ತರಬೇತಿ ಕೇಂದ್ರ ಸ್ಥಾಪನೆ. ಭಾಷಾ ವಿಷಯಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ನಿರಂತರ ತರಬೇತಿ ನೀಡಲು ಕ್ರಮ.

* ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ‘ಸ್ಪರ್ಧಾ ಕಲಿ’ ಯೋಜನೆ. ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ₹1.5 ಕೋಟಿ ಅನುದಾನ.

* ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕೇಂದ್ರಗಳ ಡಿಜಿಟಲೀಕರಣಕ್ಕೆ ₹1 ಕೋಟಿ ಅನುದಾನ. ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ತರಬೇತಿಗೆ ₹2 ಕೋಟಿ ಅನುದಾನ.

ಉನ್ನತ ಶಿಕ್ಷಣ

* ಬೆಂಗಳೂರು ಕೇಂದ್ರ ವಿವಿಯಲ್ಲಿ ಹೊಸ ಪೀಳಿಗೆ ಉನ್ನತ ಶಿಕ್ಷಣ (Next Generation Learning
Initiative) ಕಾರ್ಯಕ್ರಮದ ಮೂಲಕ ಹೊಸ ಕಲಿಕಾ ವಿಧಾನಗಳ ಅಳವಡಿಕೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಿತಿ.

* ಆನ್‌ಲೈನ್ಸಿಇಟಿ ಪರೀಕ್ಷೆಗೆ ಕ್ರಮ.ಆಧಾರ್ ಆಧರಿತ ಡಿಜಿಟಲ್ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ ಆನ್‌ಲೈನ್ ವಿತರಣೆ, ದೃಢೀಕರಣ. ₹2 ಕೋಟಿ ಅನುದಾನ.

* ಹಾಸನದಲ್ಲಿ ಹೊಸ ತಾಂತ್ರಿಕ ವಿವಿ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮರುವಿಂಗಡನೆ. ಎಲ್ಲ ಪ್ರಥಮ ದರ್ಜೆ ಕಾಲೇಜು ಮತ್ತು ವಿವಿಗಳಲ್ಲಿ ಉದ್ಯೋಗ ಆಧರಿತ ಶಿಕ್ಷಣ ನೀಡಲು ತರಬೇತಿ ಕೇಂದ್ರ. ಅಧ್ಯಾಪಕರಿಗೆ ಅಗತ್ಯ ಬೋಧನ ತರಬೇತಿ.

* 7ನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಸರ್ಕಾರಿ/ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು, ವಿವಿಗಳ ಬೋಧಕ ಮತ್ತು ತತ್ಸಮಾನ ವೃಂದಗಳ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ.

* ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಪ್ರಯೋಗಾಲಯ/ಕಾರ್ಯಾಲಯ ಸೌಲಭ್ಯ ಕಲ್ಪಿಸಲು ₹10 ಕೋಟಿ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ

* ಅಂಗನವಾಡಿ ಕಾರ್ಯಕರ್ತೆಯರಿಗೆ ₹500 ಹಾಗೂ ಸಹಾಯಕರಿಗೆ ₹250 ಗೌರವಧನ ಹೆಚ್ಚಳ.

* 1000 ಅಂಗನವಾಡಿ ಕಟ್ಟಡಗಳ ದುರಸ್ತಿ ಕಾಮಗಾರಿಗೆ ₹10 ಕೋಟಿ, ನಗರ ಪ್ರದೇಶಗಳಲ್ಲಿ ₹100 ಕೋಟಿ ಹೊಸ ಅಂಗನವಾಡಿ ಕೇಂದ್ರ ಆರಂಭ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ಬಾಲಕಿಯರ ಬಾಲಮಂದಿರ.

* ಶ್ರವಣ ದೋಷವುಳ್ಳ ಮಕ್ಕಳು ಮತ್ತು ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕರ ತರಬೇತಿಗೆ ಕ್ರಮ.

* 30 ಸಂಯುಕ್ತ ವಿದ್ಯಾರ್ಥಿ ನಿಯಲಗಳನ್ನು ಆರಂಭಿಸಲು ₹100 ಕೋಟಿ ಅನುದಾನ.

* ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಜಿಯಂ ಸ್ಥಾಪನೆಗೆ ₹20 ಕೋಟಿ ಅನುದಾನ. ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) 100 ವಸತಿ ಶಾಲೆಗಳನ್ನು ಪಿಯುಸಿಗೆ ಮೇಲ್ದರ್ಜೆಗೇರಿಸಲು ಕ್ರಮ.

* ವಿಭಾಗ ಮಟ್ಟದಲ್ಲಿ 4 ಹಿಂದುಳಿದ ವರ್ಗಗಳ ಮೊರಾರ್ಜಿ ಪದವಿ ಪೂರ್ವ ಕಾಲೇಜುಗಳಲ್ಲಿ ಐಐಟಿ/ನೀಟ್ ಪರೀಕ್ಷಾ ತರಬೇತಿ ಕೇಂದ್ರಗಳ ಸ್ಥಾಪನೆ. ₹4 ಕೋಟಿ ಅನುದಾನ.

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣ. ₹40 ಕೋಟಿ ಅನುದಾನ.

* ಮಾಲೂರು ತಾಲ್ಲೂಕು ಶಿವಾರಪಟ್ಟಣದಲ್ಲಿ ₹10 ಕೋಟಿ ಅನುದಾನದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ.

* ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ₹25 ಕೋಟಿ ಅನುದಾನ.

* ದಾವಣಗೆರೆ, ತುಮಕೂರು, ಗದನ, ಧಾರವಾಡ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆಗೆ ₹20 ಕೋಟಿ ಅನುದಾನ.

* 25 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಳ. 20 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸಂಖ್ಯಾಬಲ 60ಕ್ಕೆ ಹೆಚ್ಚಳ.

ಕ್ರೀಡೆ

* ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾ ವಸತಿನಿಲಯಗಳ ನಿರ್ಮಾಣ. ₹12.5 ಕೋಟಿ ಅನುದಾನ.

* ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರ್ಗಿ, ಕೋಲಾರ, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ. ₹15 ಕೋಟಿ ಅನುದಾನ.

* ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟುಗಳ ಊಟೋಪಚಾರದ ದಿನಭತ್ಯೆ ಭಾರತೀಯ ಕ್ರೀಡಾ ಪ್ರಾಧಿಕಾರದ ಮಟ್ಟಕ್ಕೆಹೆಚ್ಚಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT