ತೆರಿಗೆ ಹಣ ಪುತ್ರನ ಚುನಾವಣೆಗೆ ಬಳಕೆ: ಯಡಿಯೂರಪ್ಪ

ಶುಕ್ರವಾರ, ಏಪ್ರಿಲ್ 19, 2019
22 °C

ತೆರಿಗೆ ಹಣ ಪುತ್ರನ ಚುನಾವಣೆಗೆ ಬಳಕೆ: ಯಡಿಯೂರಪ್ಪ

Published:
Updated:

ಚಾಮರಾಜನಗರ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನರ ತೆರಿಗೆ ₹ 150 ಕೋಟಿ ಲೂಟಿ ಮಾಡಿ ತಮ್ಮ ಪುತ್ರ ನಿಖಿಲ್  ಗೆಲುವಿಗಾಗಿ ಬಳಕೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇಲ್ಲಿ ಭಾನುವಾರ ಆರೋಪಿಸಿದರು.

ಚಾಮರಾಜನಗರ ಮೀಸಲು ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಪರ ನಗರದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಪ್ರತಿ ಬೂತ್‌ಗೆ ಹಣ ಹಂಚುವುದು ಹಾಗೂ ಹಣದ ವಿಚಾರವಾಗಿ ಸಂಸದ ಶಿವರಾಮೇಗೌಡ ಅವರ ಪುತ್ರ ಚೇತನ್‌ ಗೌಡ ಜೆಡಿಎಸ್‌ ಮುಖಂಡರ ಜೊತೆ 17 ನಿಮಿಷ ಮಾತನಾಡಿರುವ ದಾಖಲೆ ಲಭ್ಯವಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ: ಯಾವುದೇ ತನಿಖೆಗೂ ಹೆದರಿಲ್ಲ: ಎಚ್‌ಡಿಕೆ

‘ಪ್ರತಿ ಬೂತ್‌ಗೆ ₹ 5 ಲಕ್ಷ ಕೊಟ್ಟು ₹ 150 ಕೋಟಿ ಖರ್ಚು ಮಾಡಿ ನಿಖಿಲ್‌ ಗೆಲ್ಲಿಸುವಂಥ ಸಂಕಲ್ಪ ಮಾಡಿರುವ ಕುಮಾಸ್ವಾಮಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇದೆಯೇ’ ಎಂದು ಪ್ರಶ್ನಿಸಿದರು.

‘ಈ ಘಟನೆ, ದಾಖಲೆ ಪರಿಶೀಲನೆ ಮಾಡಿ ಯಾವ ಗುತ್ತಿಗೆದಾರರು ಪೊಲೀಸ್‌ ಜೀಪುಗಳಲ್ಲಿ ಹಣವನ್ನು ಹಂಚುವ ಪ್ರಯತ್ನ ಮಾಡುತ್ತಿದ್ದಾರೊ ಪರಿಶೀಲಿಸಬೇಕು. ಇದನ್ನು ಕೊನೆಗೊಳಿಸುವ ಪ್ರಯತ್ನವನ್ನು ಚುನಾವಣಾ ಆಯೋಗ ಮಾಡಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !