ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೆಸಿಂಡೊ’ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

Last Updated 20 ಸೆಪ್ಟೆಂಬರ್ 2019, 19:48 IST
ಅಕ್ಷರ ಗಾತ್ರ

ಯಲಹಂಕ:ಹೆಬ್ಬಾಳ ಕೆಂಪಾಪುರದ ಸಿಂಧಿ ಕಾಲೇಜಿನಲ್ಲಿ ಆಯೋಜಿಸಿರುವ ‘ಕ್ರೆಸಿಂಡೊ-2019’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಿತ್ರ ನಿರ್ದೇಶಕ ಸಂತೋಷ್‌ ಆನಂದರಾಮ್‌ ಚಾಲನೆ ನೀಡಿದರು.

‘ನಿಮ್ಮಲ್ಲಿರುವ ಪ್ರತಿಭೆಯನ್ನು ನೀವೇ ಗುರುತಿಸಿಕೊಂಡು ದೊಡ್ಡ ಕನಸುಗಳನ್ನು ಕಾಣಬೇಕು. ಅದನ್ನು ಸಾಕಾರಗೊಳಿಸಲು ಶ್ರದ್ಧೆಯಿಂದ ಪ್ರಯತ್ನಿಸಬೇಕು’ ಎಂದು ಸಂತೋಷ್ ಸಲಹೆ ನೀಡಿದರು.

ಸಿಂಧಿ ಸೇವಾಸಮಿತಿಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನಗರದ 150ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.ಫ್ಯಾಷನ್ ಷೋ, ಮೆಹಂದಿ, ಸಮೂಹನೃತ್ಯ, ಜೋಡಿ ನೃತ್ಯ, ಚರ್ಚಾ ಸ್ಪರ್ಧೆ, ಛಾಯಾಗ್ರಹಣ, ರಸಪ್ರಶ್ನೆ ಸೇರಿದಂತೆ 45 ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಾಂಶುಪಾಲ ಡಾ.ಬಿ.ಎಸ್.ಶ್ರೀಕಂಠ, ಚಿತ್ರನಟ ವಿನಾಯಕ ಜೋಶಿ, ನಟಿ ನಯನಾ ಪುಟ್ಟಸ್ವಾಮಿ, ಸಿಂಧಿ ಸೇವಾ ಸಮಿತಿಯ ಅಧ್ಯಕ್ಷ ಮದನ್ ದೌಲತ್‌ರಾಂ, ಸಿಂಧಿ ಕಾಲೇಜು ಅಧ್ಯಕ್ಷ ಪ್ರಕಾಶ್ ನಾರಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT