ಬುಧವಾರ, ನವೆಂಬರ್ 20, 2019
20 °C

ಬಾಲಕಿ ಮೇಲೆ ಅತ್ಯಾಚಾರ ಯತ್ನ: ವೃದ್ಧನ ಬಂಧನ

Published:
Updated:

ಯಳಂದೂರು (ಚಾಮರಾಜನಗರ ಜಿಲ್ಲೆ): ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 70 ವರ್ಷದ ವೃದ್ಧನನ್ನು ತಾಲ್ಲೂಕಿನ ಕೋಮಾರನಪುರ ಗ್ರಾಮದಲ್ಲಿ ಶುಕ್ರವಾರ ಬಂಧಿಸಲಾಗಿದೆ. 

ರಂಗಶೆಟ್ಟಿ ಬಂಧಿತ ವ್ಯಕ್ತಿ. ಬಾಲಕಿ ಒಬ್ಬಳೇ ಇರುವುದನ್ನು ಅರಿತ ಆರೋಪಿ, ಆಕೆಯ ಮನೆಗೆ ನುಗ್ಗಿ ಅನುಚಿತವಾಗಿ ವರ್ತಿಸಿದ್ದಾರೆ. ಆಕೆಯ ತಂದೆ ಬರುವುದನ್ನು ಗಮನಿಸಿದ ನಂತರ ಸುಮ್ಮನಾಗಿದ್ದಾರೆ. ನಡೆದ ವಿಷಯವನ್ನು ಬಾಲಕಿಯು ತಂದೆಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ದೈಹಿಕವಾಗಿ ನ್ಯೂನತೆ ಹೊಂದಿರುವ ರಂಗಶೆಟ್ಟಿ, ಒಂದು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. 

‘ಆರೋಪಿಯನ್ನು ಬಂಧಿಸಲಾಗಿದ್ದು, ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಎ.ಕೆ.ರಾಜೇಶ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)