ಎಡಕುಮೇರಿ ಹಳಿಗಳ ಮೇಲೆ ಬಿದ್ದಿವೆ ಬಂಡೆಗಳು: ಸಕಲೇಶಪುರ–ಸುಬ್ರಹ್ಮಣ್ಯ ರೈಲು ಸ್ಥಗಿತ

7

ಎಡಕುಮೇರಿ ಹಳಿಗಳ ಮೇಲೆ ಬಿದ್ದಿವೆ ಬಂಡೆಗಳು: ಸಕಲೇಶಪುರ–ಸುಬ್ರಹ್ಮಣ್ಯ ರೈಲು ಸ್ಥಗಿತ

Published:
Updated:

ಎಡಕುಮೇರಿ(ಹಾಸನ): ಎಡಕುಮೇರಿ ಸಮೀಪದ ರೈಲು ಹಳಿ ಮೇಲೆ ಬೃಹತ್ ಬಂಡೆಗಳು ಐದು ದಿನಗಳಿಂದ ಬಿದ್ದಿರುವುದರಿಂದ ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. 

ಬಂಡೆ ಮತ್ತು ಕುಸಿದಿರುವ ಮಣ್ಣು ತೆರವಿಗೆ ಹೆಚ್ಚಿನ ಸಮಯ ತಗುಲುವ ಸಾಧ್ಯತೆ ಇದೆ.

**
ಪ್ರವಾಹದಿಂದಾಗಿ ಮಂಗಳೂರಿನಿಂದ ಪಾಲಕ್ಕಾಡ್‌ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲು ಸೇವೆಯನ್ನೂ ಶುಕ್ರವಾರ ರದ್ದು ಪಡಿಸಲಾಗಿದೆ.

ಕಣ್ಣೂರು/ಕಾರವಾರ– ಬೆಂಗಳೂರು (16518/16524) ಎಕ್ಸ್‌ಪ್ರೆಸ್‌ ರೈಲು, ಬೆಂಗಳೂರು– ಕಣ್ಣೂರು/ಕಾರವಾರ (16511/16513) ರೈಲು, ಚೆನ್ನೈ ಸೆಂಟ್ರಲ್– ಮಂಗಳೂರು ಸೆಂಟ್ರಲ್ (12601) ಎಕ್ಸ್‌ಪ್ರೆಸ್‌, ಚೆನ್ನೈ ಸೆಂಟ್ರಲ್– ಮಂಗಳೂರು ಸೆಂಟ್ರಲ್‌ (22637) ವೆಸ್ಟ್ ಕೋಸ್ಟ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದಾಗಿವೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !