ಕಾರವಾರ: ಬೀದಿನಾಯಿಗಳ ದಾಳಿಗೆ ಯುವಕನ ಸಾವು

7

ಕಾರವಾರ: ಬೀದಿನಾಯಿಗಳ ದಾಳಿಗೆ ಯುವಕನ ಸಾವು

Published:
Updated:

ಕಾರವಾರ: ನಗರದ ನಂದನಗದ್ದಾದಲ್ಲಿ ಭಾನುವಾರ ರಾತ್ರಿ ಬೀದಿನಾಯಿಗಳ ದಾಳಿಗೆ ಯುವಕರೊಬ್ಬರು ಮೃತಪಟ್ಟಿದ್ದಾರೆ.

ಗುನಿಗಿವಾಡದ ದೀಪಕ (ಶಾಣೆ) ನಾಯ್ಕ (30) ಮೃತಪಟ್ಟವರು. ಸಮೀಪದ ಸ್ಮಶಾನದ ಬಳಿ ಮೂತ್ರ ವಿಸರ್ಜನೆಗೆಂದು ಅವರು ಸೈಕಲ್‌ನಲ್ಲಿ ಬಂದಿದ್ದರು. ಆಗ ಹತ್ತಾರು ಬೀದಿನಾಯಿಗಳ ಗುಂಪು ಅವರನ್ನು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿವೆ. 

ದೀಪಕ ಹೊಟ್ಟೆ, ತಲೆಗೆ ನಾಯಿಗಳು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಅವುಗಳಿಂದ ಚೇತರಿಸಿಕೊಳ್ಳದ ಅವರು ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತದೇಹವು ಸ್ಮಶಾನದ ದ್ವಾರದ ಬಳಿ ಪತ್ತೆಯಾಗಿದೆ ಎಂದು ತನಿಖೆ ನಡೆಸುತ್ತಿರುವ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಕ್ರಮಕ್ಕೆ ಆಗ್ರಹ: ನಗರದಲ್ಲಿ ಬೀದಿ ನಾಯಿಗಳು ಮತ್ತು ಬಿಡಾಡಿ ದನಗಳ ಹಾವಳಿ ಮಿತಿಮೀರಿದೆ. ರಸ್ತೆಯ ಮಧ್ಯೆಯೇ ಓಡಿಬರುವ ನಾಯಿಗಳು, ಜಾನುವಾರು ಸಾರ್ವಜನಿಕರ ಜೀವಕ್ಕೆ ಅಪಾಯ ತರುತ್ತಿವೆ. ಅವುಗಳ ನಿಯಂತ್ರಣಕ್ಕೆ ನಗರಸಭೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !