ಭಾನುವಾರ, ನವೆಂಬರ್ 17, 2019
27 °C

ಯುವ ದಸರೆ ಸಿಂಧು, ರಾನು ಆಕರ್ಷಣೆ

Published:
Updated:
Prajavani

ಮೈಸೂರು: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು ಹಾಗೂ ಗಾಯಕಿ ರಾನು ಮಂಡಲ್‌ ಈ ಬಾರಿಯ ಯುವ ದಸರೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

ದಸರಾ ಮಹೋತ್ಸವ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ಯುವ ದಸರೆಗೆ ಸಿಂಧು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದ ರೈಲ್ವೆ ಪ್ಲಾಟ್‌ಫಾರಂನಲ್ಲಿ ಹಾಡುತ್ತಿದ್ದ ರಾನು ಅವರನ್ನು ಸನ್ಮಾನಿಸಲಾಗುತ್ತಿದೆ.

ಅವರು ಗಾನಸುಧೆ ಹರಿಸಲಿದ್ದಾರೆ. ಬಾಲಿವುಡ್‌ ಗಾಯಕ ಗುರು ರಾಂಧವ ಅವರು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪ್ರತಿಕ್ರಿಯಿಸಿ (+)