ಆರು ಮೃಗಾಲಯಗಳ ಮೇಲ್ದರ್ಜೆಗೆ ಮಾಸ್ಟರ್‌ ಪ್ಲಾನ್‌ !

7

ಆರು ಮೃಗಾಲಯಗಳ ಮೇಲ್ದರ್ಜೆಗೆ ಮಾಸ್ಟರ್‌ ಪ್ಲಾನ್‌ !

Published:
Updated:

ಬೆಂಗಳೂರು: ದಾವಣಗೆರೆ, ಬೆಳಗಾವಿ, ಗದಗ, ಕಲಬುರಗಿ, ಶಿವಮೊಗ್ಗ ಮತ್ತು ಚಿತ್ರದುರ್ಗ ಕಿರು ಮೃಗಾಲಯಗಳನ್ನು ಮೇಲ್ದರ್ಜೆಗೇರಿಸಲು ಮಾಸ್ಟರ್‌ ಪ್ಲಾನ್ ಸಿದ್ಧಪಡಿಸಿ ಕೇಂದ್ರೀಯ ಮೃಗಾಲಯದ ಅನುಮೋದನೆಗೆ ಕಳುಹಿಸಲಾಗಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ 2017–18ರ ಸಾಲಿನ ವರದಿಯಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಅರಣ್ಯ ಸಚಿವ ಆರ್‌.ಶಂಕರ್‌ ಅವರು ಗುರುವಾರ ವಿಧಾನಸೌಧದಲ್ಲಿ ವರದಿ ಬಿಡುಗಡೆಗೊಳಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಮತ್ತು ಹೈನಾ ಸಫಾರಿಗಾಗಿ ಆವರಣಗಳ ನಿರ್ಮಾಣ ಮಾಡಲಾಗುತ್ತಿದೆ. ಹೈನಾ ಪ್ರಾಣಿಯ ಆವರಣ ನಿರ್ಮಾಣ ಮತ್ತು 2 ಚಿರತೆಗಳಿಗೆ ಹೋಲ್ಡಿಂಗ್‌ ಗೃಹ ನಿರ್ಮಾಣಕ್ಕಾಗಿ ₹1.35 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಮೈಸೂರು ಮಹಾನಗರ ಪಾಲಿಕೆ ನಿರ್ಮಿಸಿರುವ ಅಕ್ವೇರಿಯಂ ನಿರ್ಲಕ್ಷ್ಯಕ್ಕೆ ಈಡಾಗಿದೆ. ಸುಮಾರು 6 ಸಾವಿರ ಚದರಡಿಯ ಈ ಅಕ್ವೇರಿಯಂ ಅನ್ನು ಮೈಸೂರು ಮೃಗಾಲಯದ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರ ಕಾಮಗಾರಿ ಪೂರ್ಣಗೊಳಿಸಲು ಅಂದಾಜು ₹25 ಕೋಟಿ ಬೇಕಾಗುತ್ತದೆ. ಇದಕ್ಕಾಗಿ ಸಾಲ ಪಡೆದು ನಿರ್ಮಿಸಲಾಗುವುದು. ಅಕ್ವೇರಿಯಂನಿಂದ ಉತ್ಪತ್ತಿಯಾಗುವ ಆದಾಯದಿಂದ ಸಾಲದ ಮೊತ್ತವನ್ನು ತೀರಿಸಲು ಉದ್ದೇಶಿಸಲಾಗಿದೆ ಎಂದು ವರದಿ ತಿಳಿಸಿದೆ.

ವೆಬ್‌ಸೈಟ್‌ ಅನಾವರಣ:

ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೆಬ್‌ಸೈಟ್‌ ಅನ್ನು ಸಚಿವ ಶಂಕರ್ ಉದ್ಘಾಟಿಸಿದರು. ಈ ವೆಬ್‌ಸೈಟ್‌ ಮೂಲಕ ಮೈಸೂರು, ಬನ್ನೇರುಘಟ್ಟ, ಬಳ್ಳಾರಿ, ಕಲಬುರ್ಗಿ, ದಾವಣಗೆರೆ, ಗದಗ, ಬೆಳಗಾವಿ, ಹೊಸಪೇಟೆ ಮತ್ತು ಕಮಲಾಪುರ ಮೃಗಾಲಯಗಳ ಮಾಹಿತಿ ಪಡೆಯಬಹುದಾಗಿದೆ. ವೆಬ್‌ಸೈಟ್‌ ವಿಳಾಸ www.zoosofkarnataka.com

**

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !