ಗುರುವಾರ , ಸೆಪ್ಟೆಂಬರ್ 19, 2019
26 °C

ಸೈಟ್‌ ಕೊಡಿಸುವುದಾಗಿ ವಂಚನೆ– ಆರೋಪ: ಜಿ.ಪಂ ಅಧ್ಯಕ್ಷೆಯ ಪತಿ ಪ್ರಶಾಂತ ಬಂಧನ

Published:
Updated:
Prajavani

ಬೆಳಗಾವಿ: ಸೈಟ್‌ ಕೊಡಿಸುವುದಾಗಿ ₹ 2 ಲಕ್ಷ ಪಡೆದು ವಂಚಿಸಿದ ಆರೋಪದ ಮೇಲೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಪತಿ ಪ್ರಶಾಂತ ಐಹೊಳೆ ಅವರನ್ನು ಅಥಣಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಮಹಾಲಕ್ಷ್ಮಿ ಎಸ್ಟೇಟ್ಸ್‌ ಕಂಪೆನಿ ನಡೆಸುತ್ತಿದ್ದ ಪ್ರಶಾಂತ ಐಹೊಳೆ ಅವರಿಗೆ ಅಥಣಿಯಲ್ಲಿ ಸೈಟ್‌ ಕೊಡಿಸುವಂತೆ ₹ 2 ಲಕ್ಷ ಹಣ ನೀಡಿದ್ದೆ. ಆದರೆ, ಸೈಟ್‌ ನೀಡದೆ ವಂಚಿಸಿದ್ದಾರೆ’ ಎಂದು ಸಂಜಯ ಸಂಕಪಲ್ಕರ್‌ ದೂರು ನೀಡಿದ್ದರು.

‘ಸಂಜಯ ಅವರ ದೂರಿನ ಮೇರೆಗೆ ಸೂಕ್ತ ಪ್ರಶಾಂತ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ್‌ ರೆಡ್ಡಿ ತಿಳಿಸಿದರು.

 

Post Comments (+)