ಭಾನುವಾರ, ಜೂನ್ 20, 2021
30 °C

ಅಮೆರಿಕದಲ್ಲಿ ಚೀನಾ ಮೂಲದ ಟಿಕ್‌ಟಾಕ್ ನಿಷೇಧಕ್ಕೆ ಚಿಂತನೆ: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಚೀನಾ ಮೂಲದ ವಿಡಿಯೊ ಶೇರಿಂಗ್‌ ಆ್ಯಪ್‌ ಟಿಕ್‌ಟಾಕ್‌‌ ಅನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ನಾವು ಟಿಕ್‌ಟಾಕ್‌ನತ್ತ ಗಮನಹರಿಸಿದ್ದೇವೆ. ಅದನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದ್ದೇವೆ. ಅದೇರೀತಿ ಇಂತಹ ಇನ್ನೂ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ನಮ್ಮ ಬಳಿ ಒಂದೆರಡು ಆಯ್ಕೆಗಳಿವೆ. ಆದರೆ, ಟಿಕ್‌ಟಾಕ್‌ಗೆ ಸಂಬಂಧಿಸಿದಂತೆ ಸಾಕಷ್ಟು ಪರ್ಯಾಯಗಳನ್ನು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಟ್ರಂಪ್‌, ‘ಟಿಕ್‌ಟಾಕ್‌ ನಿಷೇಧಿಸುವ ಕುರಿತು ಆಲೋಚಿಸುತ್ತಿದ್ದೇವೆ’ ಎಂದು ಬುಧವಾರವೂ ಹೇಳಿದ್ದರು. 

ಆ್ಯಪ್‌ ಬಳಕೆದಾರರ ಮಾಹಿತಿ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆ ಬಗ್ಗೆ ಕಳೆದ ತಿಂಗಳು ಕಳವಳ ವ್ಯಕ್ತಪಡಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ಟಿಕ್‌ಟಾಕ್‌ ಸೇರಿದಂತೆ ಚೀನಾದ ಹಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸಲು ಚಿಂತನೆ ನಡೆದಿದೆ ಎಂದಿದ್ದರು.

‘ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ವಿದೇಶಾಂಗ ನೀತಿಯ ಗುರಿಗಳನ್ನು ಮುನ್ನಡೆಸಲು ನೆರವಾಗುವಂತೆ ಟಿಕ್‌ಟಾಕ್ ತನ್ನ ಬಳಕೆದಾರರ ಮಾಹಿತಿಯನ್ನು ನಿರ್ವಹಿಸುತ್ತಿದೆ. ಹಾಗಾಗಿ ಅಮೆರಿಕನ್ನರ ಮಾಹಿತಿ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಲು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಮೆರಿಕ ಕಾಂಗ್ರೆಸ್‌ನ (ಸಂಸತ್ತಿನ‌) 25 ಸದಸ್ಯರು ಒತ್ತಾಯಿಸಿದ್ದರು.

ಭಾರತವು, ಟಿಕ್‌ಟಾಕ್‌, ವಿ–ಚಾಟ್‌ ಸೇರಿದಂತೆ 59 ಆ್ಯಪ್‌ಗಳ ಮೇಲೆ ಜೂನ್‌ ತಿಂಗಳಲ್ಲಿ ನಿರ್ಬಂಧ ಹೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು