ಮಂಗಳವಾರ, ಜೂನ್ 22, 2021
27 °C
ಇ–ಮೇಲ್‌ ಮೂಲಕ ಮತ ಚಲಾವಣೆಗೆ ಹೆಚ್ಚುತ್ತಿರುವ ಒಲವು

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಫಲಿತಾಂಶ ವಿಳಂಬ ಸಾಧ್ಯತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ನವೆಂಬರ್‌ 3ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದರೂ, ಅದೇ ದಿನ ರಾತ್ರಿ ಫಲಿತಾಂಶ ಹೊರಬೀಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಇ–ಮೇಲ್‌ ಮೂಲಕ ಮತ ಚಲಾವಣೆ ಮಾಡಲು ಮತದಾರರಲ್ಲಿ ಒಲವು ಹೆಚ್ಚುತ್ತಿದೆ. ಇಂತಹ ಮತಗಳ ಎಣಿಕೆ ತಡವಾಗುವುದು. ಇದೇ ಕಾರಣಕ್ಕೆ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ.

ಹಾಗಂತ, ಫಲಿತಾಂಶ ದೋಷಪೂರಿತವಾಗಿರಲಿದೆ ಅಥವಾ ಮೋಸದಿಂದ ಕೂಡಿರಲಿದೆ ಎಂದು ಭಾವಿಸಬೇಕಿಲ್ಲ ಎಂದೂ ಅವರು ಹೇಳಲು ಮರೆಯುವುದಿಲ್ಲ.

ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತ್ರ ಚುನಾವಣೆ ನಡೆಯುವ ನವೆಂಬರ್‌ 3ರ ರಾತ್ರಿಯೇ ಫಲಿತಾಂಶ ಪ್ರಕಟವಾಗಬೇಕು ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ. ತಡವಾಗಿ ಪ್ರಕಟವಾಗುವ ಫಲಿತಾಂಶವನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ ಎಂಬರ್ಥದ ಮಾತುಗಳನ್ನೂ ಆಡುತ್ತಿದ್ದಾರೆ. 

‘ಇ–ಮೇಲ್‌ ಮತ ಚಲಾವಣೆಗೆ ಚುನಾವಣಾ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿದೆ. ಇದರಿಂದ ಚುನಾವಣಾ ಅಕ್ರಮ ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಫಲಿತಾಂಶ ಹೊರಬೀಳಲು ವಾರವಾಗಬಹುದು, ಹಲವು ತಿಂಗಳುಗಳೇ ಬೇಕಾಗಬಹುದು’ ಎಂದು ಟ್ರಂಪ್‌ ಅವರು ಶುಕ್ರವಾರ ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು