ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ವಿಗ್ನತೆ ಶಮನಕ್ಕೆ ಕ್ರಮ: ಚೀನಾ

Last Updated 6 ಜುಲೈ 2020, 10:58 IST
ಅಕ್ಷರ ಗಾತ್ರ

ಬೀಜಿಂಗ್‌: ‘ವಾಸ್ತವ ಗಡಿಪ್ರದೇಶದಿಂದ ಹಿಂದೆ ಸರಿಯುವ ಮೂಲಕ ಚೀನಾದ ಮುಂಚೂಣಿಯ ಪಡೆಗಳು ಗಲ್ವಾನ್‌ ಕಣಿವೆಯ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿವೆ’ ಎಂದು ಚೀನಾ ಸೋಮವಾರ ಹೇಳಿದೆ.

ಚೀನಾ ಪಡೆಗಳು ಗಡಿಪ್ರದೇಶದಿಂದ ಹಿಂದಕ್ಕೆ ಸರಿಯುತ್ತಿವೆ ಎಂದು ಭಾರತದ ಸರ್ಕಾರಿ ಮೂಲಗಳು ಹೇಳಿದ ಸ್ವಲ್ಪ ಸಮಯದಲ್ಲೇ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಝಾಹೊ ಲಿಜಿಯನ್‌ ಈ ಹೇಳಿಕೆ ನೀಡಿದ್ದಾರೆ.

‘ಒಮ್ಮತದ ತೀರ್ಮಾನಗಳಿಗೆ ಭಾರತವೂ ಬದ್ಧವಾಗುತ್ತದೆ, ಚೀನಾದ ಜತೆಗೆ ಸೇನೆ ಹಾಗೂ ರಾಜತಾಂತ್ರಿಕ ಮಟ್ಟದ ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತವೂ ಸಹಕಾರ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ’ ಎಂದು ಝಾಹೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT